ಹಾಯ್ ವಿಕ್ರಮ್‌…ಮತ್ತೊಮ್ಮೆ ಫೋಟೋ ತೆಗೆದ ಪ್ರಗ್ಯಾನ್‌ ರೋವರ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌  

ಚಂದ್ರನ ನೆಲದ ಮೇಲೆ ವಿಕ್ರಮ್‌ ಲ್ಯಾಂಡರ್‌ನ ಚಿತ್ರವನ್ನು ಪ್ರಗ್ಯಾನ್‌ ರೋವರ್ ಮುಂಜಾನೆ ತೆಗೆದಿದ್ದು , ಇದೀಗ ಮತ್ತೊಮ್ಮೆ ಈಗ ತೆಗೆದು ಕಳುಹಿಸಿದೆ.

ಅಂದಾಜು 4 ಲಕ್ಷ ಕಿಲೋಮೀಟರ್‌ ದೂರದಲ್ಲಿ ಚಂದ್ರನ ದಕ್ಷಿಣ ಧ್ರುವದಲ್ಲಿ ಪರಿಶೋಧನೆಗೆ ಇಳಿದಿರುವ ವಿಕ್ರಮ್‌ ಲ್ಯಾಂಡರ್‌ ಹಾಗೂ ಪ್ರಗ್ಯಾನ್‌ ರೋವರ್‌ನ ಆಯಸ್ಸು ಇರುವುದು ಇನ್ನು ಏಳು ದಿನಗಳು ಮಾತ್ರ. ಅಷ್ಟರಲ್ಲಾಗಲೇ ಕೆಲವೊಂದು ವೈಜ್ಞಾನಿಕ ಸಂಶೋಧನೆಗಳನ್ನು ಇವರಿಬ್ಬರೂ ನಡೆಸುತ್ತಿದ್ದಾರೆ. ಇದರ ನಡುವೆ ಬುಧವಾರ ಬೆಳಗ್ಗೆ ಭಾರತೀಯ ಕಾಲಮಾನ 11 ಗಂಟೆ 4 ನಿಮಿಷದ ವೇಳೆ ವಿಕ್ರಮ್‌ ಲ್ಯಾಂಡರ್‌ನಿಂದ 15 ಮೀಟರ್‌ ದೂರದಲ್ಲಿ ನಿಂತು ಪ್ರಗ್ಯಾನ್‌ ರೋವರ್‌ ಚಿತ್ರ ತೆಗೆದಿದೆ.

‘ಎಲ್ಲಾ ಗಡಿಗಳನ್ನು ದಾಟಿಕೊಂಡು, ಇಡೀ ಚಂದ್ರನ ಒಳಗೊಂಡು, ಭಾರತದ ಸಾರ್ವಭೌಮತೆಗೆ ಮಿತಿ ಅನ್ನೋದೇ ಇಲ್ಲ. ಮತ್ತೊಮ್ಮೆ ಸಹ ಪ್ರಯಾಣಿಕ ಪ್ರಗ್ಯಾನ್‌, ವಿಕ್ರಮನ ಚಿತ್ರವನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾನೆ. ಈ ಐತಿಹಾಸಿಕ ಚಿತ್ರವನ್ನು ಇಂದು ಬೆಳಗ್ಗೆ 11 ಗಂಟೆಯ ಸುಮಾರಿಗೆ ವಿಕ್ರಮ್‌ ಲ್ಯಾಂಡರ್‌ನಿಂದ 15 ಮೀಟರ್‌ ದೂರದಲ್ಲಿ ನಿಂತು ಪ್ರಗ್ಯಾನ್‌ ತೆಗೆದುಕೊಂಡಿದೆ. ರೋವರ್‌ನಲ್ಲಿದ್ದ ನ್ಯಾವಿಗೇಷನ್‌ ಕ್ಯಾಮೆರಾ ಸೆರೆ ಹಿಡಿದ ಚಿತ್ರಗಳನ್ನು ಅಹಮದಾಬಾದ್‌ನಲ್ಲಿರುವ ಇಸ್ರೋದ ಸ್ಪೇಸ್‌ ಅಪ್ಲಿಕೇಶನ್‌ ಸೆಂಟರ್‌ನಲ್ಲಿ ಪ್ರಕ್ರಿಯೆ ಮಾಡಲಾಗಿದೆ’ ಎಂದು ಇಸ್ರೋ ಚಿತ್ರವನ್ನು ಹಂಚಿಕೊಂಡಿದೆ.

ಇದಕ್ಕೂ ಮುನ್ನ ಚಂದ್ರಯಾನ-3 ಯೋಜನೆಯಲ್ಲಿ ಪ್ರಗ್ಯಾನ್‌ ರೋವರ್‌ ತನ್ನ ಕ್ಯಾಮೆರಾದಿಂದ ವಿಕ್ರಮ್‌ ಲ್ಯಾಂಡರ್‌ನ ಚಿತ್ರವನ್ನು ಸೆರೆಹಿಡಿದ ಫೋಟೋವನ್ನು ಇಸ್ರೋ ಬೆಳಗ್ಗೆ ಪ್ರಕಟಿಸಿತ್ತು. ಬುಧವಾರ ಮುಂಜಾನೆ 7.35ರ ವೇಳೆಗೆ ತನ್ನ ನ್ಯಾವಿಗೇಶನ್‌ ಕ್ಯಾಮೆರಾ ಬಳಸಿಕೊಂಡು ತೆಗೆದ ಚಿತ್ರ ಅದಾಗಿತ್ತು. ಅದರಲ್ಲಿ ವಿಕ್ರಮ್‌ನ ಎರಡು ಪೇಲೋಡ್‌ಗಳಾ ಚಾಸ್ಟೆ ಹಾಗೂ ಇಲ್ಸಾ ಚಂದ್ರನ ನೆಲವನ್ನು ಪರಿಶೋಧನೆ ಮಾಡುತ್ತಿರುವ ಚಿತ್ರಗಳೂ ಕಾಣಿಸಿದ್ದವು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!