ಮುಂಬೈನಲ್ಲಿ ನಾಳೆ ಯುದ್ಧನೌಕೆ ‘ಮಹೇಂದ್ರಗಿರಿ’ ಲೋಕಾರ್ಪಣೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಭಾರತದ ಯುದ್ಧನೌಕೆ ಮಹೇಂದ್ರಗಿರಿಯನ್ನು ಸೆಪ್ಟೆಂಬರ್ 1 ರಂದು ಮುಂಬೈನಲ್ಲಿ ಲೋಕಾರ್ಪಣೆಗೊಳ್ಳಲಿದೆ.

ಮುಂಬೈನ ಮಜಗಾನ್ ಡಾಕ್ ಶಿಪ್ ಬಿಲ್ಡರ್ಸ್ ಲಿಮಿಟೆಡ್‌ನಲ್ಲಿ ನಿರ್ಮಿಸಲಾದ ಯುದ್ಧನೌಕೆ ‘ಮಹೇಂದ್ರಗಿರಿ’ ಗೆ ಉಪರಾಷ್ಟ್ರಪತಿ ಜಗದೀಪ್ ಧನ್ ಖರ್ ಅವರ ಪತ್ನಿ ಡಾ.ಸುದೇಶ್ ಧಂಖರ್ ಅವರು ಯುದ್ಧನೌಕೆಗೆ ಚಾಲನೆ ನೀಡಲಿದ್ದಾರೆ.

ಮಹೇಂದ್ರಗಿರಿಯು ತಾಂತ್ರಿಕವಾಗಿ ಮುಂದುವರಿದ ಯುದ್ಧನೌಕೆಯಾಗಿದೆ. ನೌಕಾಪಡೆಯ ಸಾಮರ್ಥ್ಯಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಇದು ಪ್ರಮುಖ ಪಾತ್ರ ವಹಿಸಲಿದೆ. ಮಹೇಂದ್ರಗಿರಿಯು ಪ್ರಾಜೆಕ್ಟ್ 17A ಯ 7ನೇ ಮತ್ತು ಕೊನೆಯ ಸ್ಟೆಲ್ತ್ ಫ್ರಿಗೇಟ್ ಆಗಿದೆ. 4 ಯುದ್ಧನೌಕೆಗಳನ್ನು ಮಜಗಾನ್ ಡಾಕ್ ಶಿಪ್‌ಬಿಲ್ಡರ್ಸ್ ಲಿಮಿಟೆಡ್‌ನಲ್ಲಿ ನಿರ್ಮಿಸಲಾಗುತ್ತಿದೆ. ಉಳಿದವುಗಳನ್ನು ಕೋಲ್ಕತ್ತಾದ ಗಾರ್ಡನ್ ರೀಚ್ ಶಿಪ್‌ಬಿಲ್ಡರ್ಸ್ & ಇಂಜಿನಿಯರ್ಸ್(GRSE) ಯೋಜನೆಯಡಿಯಲ್ಲಿ ನಿರ್ಮಿಸಲಾಗುತ್ತಿದೆ.ಮಹೇಂದ್ರಗಿರಿಯ ಉಡಾವಣೆಯು ಸ್ವಾವಲಂಬಿ ನೌಕಾ ಪಡೆಯನ್ನು ನಿರ್ಮಿಸುವಲ್ಲಿ ನಮ್ಮ ರಾಷ್ಟ್ರವು ಸಾಧಿಸಿದ ಅದ್ಭುತ ಪ್ರಗತಿಗೆ ಸೂಕ್ತವಾದ ಸಾಕ್ಷಿಯಾಗಿದೆ ಎಂದು ಭಾರತೀಯ ನೌಕಾಪಡೆ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!