ಹೇಗಿದೆ ಭಾನುವಾರದ ರಾಶಿ ಭವಿಷ್ಯ…

ಮೇಷ
ಸಂತೋಷಗೊಳಿಸುವ ಹಲವು ಬೆಳವಣಿಗೆ. ವೈಯಕ್ತಿಕ ಬದುಕಿನಲ್ಲಿ ಸಮಸ್ಯೆ ನಿವಾರಣೆ, ಬಾಂಧವ್ಯ ವೃದ್ಧಿ. ಆರ್ಥಿಕ ಪರಿಸ್ಥಿತಿ ಇನ್ನಷ್ಟು ಉತ್ತಮ.

ವೃಷಭ
ನಿರಾಳ ದಿನ. ಎಲ್ಲ ಸಮಸ್ಯೆ ಮರೆತು ಬಂಧುಮಿತ್ರರ ಜತೆ ಕಾಲ ಕಳೆಯುವ ಅವಕಾಶ. ಸಮಾರಂಭದಲ್ಲಿ ಪಾಲ್ಗೊಳ್ಳುವ ಅವಕಾಶ. ಚಿಂತೆ ಪರಿಹಾರ.

ಮಿಥುನ
ನಿಮ್ಮ ಪ್ರೀತಿಪಾತ್ರರನ್ನು ಭೇಟಿ ಆಗಬೇಕೆಂಬ ನಿಮ್ಮ ಉದ್ದೇಶ ಈಡೇರುವುದು. ಅವರ ಜತೆ ಆತ್ಮೀಯ ಕಾಲಕ್ಷೇಪ. ಆರ್ಥಿಕವಾಗಿ ಉನ್ನತಿ.

ಕಟಕ
ನಿಮಗೆ ಸಂಬಂಧಿಸಿ ಹಲವಾರು ಬೆಳವಣಿಗೆ. ಒತ್ತಡ, ಉದ್ವಿಗ್ನತೆ ಸೃಷ್ಟಿ. ಸಂಜೆ ವೇಳೆಗೆ ಪರಿಸ್ಥಿತಿ ನಿರಾಳವಾಗುವುದು. ಕೌಟುಂಬಿಕ ಸಹಕಾರ, ನೆಮ್ಮದಿ.

ಸಿಂಹ
ಆತ್ಮೀಯರ ಜತೆಗೆ ಮಾತಿನ ಚಕಮಕಿ, ಭಿನ್ನಾಭಿಪ್ರಾಯ ಉಂಟಾದೀತು. ಮಾತಿನ ಮೇಲೆ ನಿಯಂತ್ರಣ ಇರಲಿ. ಸಮಾಧಾನದ ವರ್ತನೆ ಮುಖ್ಯ.

ಕನ್ಯಾ
ವೃತ್ತಿ, ಪ್ರವೃತ್ತಿಗೆ ಸಂಬಂಧಿಸಿ ಸಮಸ್ಯೆ ಎದುರಿಸುವಿರಿ. ಖರ್ಚು ಹೆಚ್ಚಳ. ಪ್ರೀತಿಯ ವಿಷಯದಲ್ಲಿ ಚಿಂತೆ. ಸಮಾಧಾನಚಿತ್ತರಾಗಿ ವ್ಯವಹರಿಸಿ.

ತುಲಾ
ಒತ್ತಡದಿಂದ ದಿನ ಆರಂಭಗೊಂಡರೂ ಬಳಿಕ ನಿರಾಳತೆ ಸಿಗಲಿದೆ. ಉದ್ದೇಶಿತ ಕಾರ್ಯ ಸಫಲ. ಹೊಟ್ಟೆ ಸಂಬಂಧಿ ಸಮಸ್ಯೆ, ಮಿತಾಹಾರ ಒಳ್ಳೆಯದು.

ವೃಶ್ಚಿಕ
ಕೆಲವು ವಿಷಯದಲ್ಲಿ ಇರಿಸುಮುರಿಸಿನ ಪರಿಸ್ಥಿತಿ ಎದುರಿಸುವಿರಿ. ಅನವಶ್ಯ ವಾದವಿವಾದಕ್ಕೆ ಹೋಗದಿರಿ. ಶಾಂತ ಮನಸ್ಥಿತಿ ಕಾಯ್ದುಕೊಳ್ಳಿ. ಧನವ್ಯಯ.

ಧನು
ಸಣ್ಣ ವಿಷಯಕ್ಕೂ ಉದ್ವಿಗ್ನತೆ ಮಾಡಿಕೊಳ್ಳದಿರಿ. ನಿಮ್ಮ ಕೆಲಸ ಪೂರೈಸಲು ಆದ್ಯತೆ ಕೊಡಿ. ಉಳಿದೆಲ್ಲವೂ ತಾನಾಗಿಯೇ ಸರಿಯಾಗುವುದು.

ಮಕರ
ಕುಟುಂಬದವರ ಕುರಿತು ಅತೀವ ಕಾಳಜಿ ವಹಿಸುವಿರಿ. ಅವರ ಹಿತಾಸಕ್ತಿ ನಿಮ್ಮ ಆದ್ಯತೆ. ಅವರು ನಿಮ್ಮ ಬದುಕಿಗೆ ಸಂತೋಷ, ಸಾಂತ್ವನ ತರುವರು.

ಕುಂಭ
ಏಕತಾನತೆಯ ದಿನ. ವಿಶೇಷವಾದುದು ಘಟಿಸದು. ಎಂದಿನಂತೆ ದಿನ ಕಳೆಯುವಿರಿ. ಆದರೆ ಸಂತೋಷದ ಬೆಳವಣಿಗೆಯೊಂದು ನಿಮ್ಮನ್ನು ಕಾದಿದೆ.

ಮೀನ
ನಿಮ್ಮ ಒಳ್ಳೆತನವನ್ನು ದುರುಪಯೋಗ ಮಾಡಿಕೊಳ್ಳಲು ಕೆಲವರು ಯತ್ನಿಸುವರು. ಕೆಲ ವಿಷಯದಲ್ಲಿ ಕಠಿಣವಾಗಿ ವರ್ತಿಸುವುದು ವಿಹಿತ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!