Friday, March 1, 2024

ಕಾವೇರಿ ನದಿಯಲ್ಲಿ ಮೊಸಳೆ ಪ್ರತ್ಯಕ್ಷ: ಸಾರ್ವಜನಿಕರ ಆತಂಕ

ಹೊಸ ದಿಗಂತ ವರದಿ, ಶ್ರೀರಂಗಪಟ್ಟಣ :

ಪಟ್ಟಣದ ರೈಲ್ವೆ ಸೇತುವೆ ಕೆಳಗೆ ಕಾವೇರಿ ನದಿಯಲ್ಲಿ ಬಾರಿ ಗಾತ್ರದ ಮೊಸಳೆ ಕಾಣಿಸಿಕೊಂಡು ಶ್ರೀರಂಗಪಟ್ಟಣ ಜನರಲ್ಲಿ ಆತಂಕ ಶುರುವಾಗಿದೆ.

ಶ್ರೀರಂಗಪಟ್ಟಣದಿಂದ ರಾಂಪುರ ಕಡೆ ತೆರಳುವ ಸೇತುವೆ ಮೇಲೆ ಹೋಗುವ ಸ್ಥಳೀಯರು ಮೊಸಳೆ ನದಿಯಲ್ಲಿ ಈಜಾಡುತ್ತಿರುವುದನ್ನು ನೋಡಿ ಅದನ್ನು ವಿಡಿಯೊ ಮಾಡಿ ಸಾಮಾಜಿಕ ಜಾಲತಾಣಗಳಿಗೆ ನೀಡಿದ್ದಾರೆ. ಅದೇ ರೈಲ್ವೆ ಸೇತುವೆ ಕೇಳ ಭಾಗದ ಸ್ವಲ್ಪ ಅಂತರದಲ್ಲಿ ಕಾವೇರಿ ಸ್ನಾನದ ಘಟ್ಟಗಳಿದ್ದು, ಹಲವು ಗ್ರಾಮಗಳಿಂದ ಬರುವರು ಕಾವೇರಿ ನದಿಯಲ್ಲಿ ಸ್ನಾನ ಮಡಿ ಮಾಡಲು ಆಗಮಿಸುತ್ತಿರುತ್ತಾರೆ. ಸಾರ್ವಜನಿಕರು ಹಾಗೂ ಅಧಿಕಾರಿಗಳ ಗಮನಕ್ಕೆ ತಂದು ನದಿಗೆ ಇಳಿಯುವ ಜನರಿಗೆ ಜಾಗೃತಿ ತಿಳುವಳಿಕೆ ಹೇಳಬೇಕಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!