ಕೇಂದ್ರದಲ್ಲಿ ಕಾಂಗ್ರೆಸ್ ಬಂದರೆ ಮಹಿಳೆಯರ ಬ್ಯಾಂಕ್ ಖಾತೆಗೆ 1.24ಲಕ್ಷ ರೂ. ಜಮೆ: ರಾಹುಲ್ ಗಾಂಧಿ ಘೋಷಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕೇಂದ್ರದಲ್ಲಿ ಕಾಂಗ್ರೆಸ್ (Congress) ಸರ್ಕಾರ ಅಧಿಕಾರಕ್ಕೆ ಬಂದರೆ ಮಹಿಳೆಯರ ಬ್ಯಾಂಕ್ ಖಾತೆಗೆ ವರ್ಷಕ್ಕೆ 1.24ಲಕ್ಷ ರೂ. ಜಮೆ ಮಾಡುವುದಾಗಿ ರಾಹುಲ್ ಗಾಂಧಿ (Rahul Gandhi) ಘೋಷಿಸಿದ್ದಾರೆ.

ಮಂಡ್ಯದಲ್ಲಿ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ರಾಜ್ಯದ 24 ಸಾವಿರದ ಜೊತೆಗೆ ಕೇಂದ್ರದಿಂದ ವರ್ಷಕ್ಕೆ 1.24 ಲಕ್ಷ ರೂ. ಹಣವನ್ನು ಮಹಿಳೆಯರ ಖಾತೆಗೆ ಜಮೆ ಮಾಡಲಾಗುವುದು. ಜೊತೆಗೆ ರೈತರ ಸಾಲಮನ್ನಾ, ಕನಿಷ್ಠ ಬೆಂಬಲ ಬೆಲೆಯ ಗ್ಯಾರಂಟಿಯನ್ನು ಘೋಷಿಸಿದ್ದಾರೆ.

ಯುವಕರಿಗೆ ಐತಿಹಾಸಿಕ ಕಾರ್ಯಕ್ರಮ ಮಾಡುತ್ತೇವೆ. ಮೊದಲು ಉದ್ಯೋಗ ಯೋಜನೆ ಜಾರಿ ಮಾಡುತ್ತೇವೆ. ಬಡವರ ಮಕ್ಕಳು ದೊಡ್ಡ ಕಾರ್ಖನೆಗಳಲ್ಲಿ ಅಪ್ರಂಟಿಶಿಪ್ ಮಾಡಿ ಕೆಲಸ ಕೊಡುವ ಕೆಲಸ ಮಾಡುತ್ತೇವೆ. ನರೇಗಾ ಯೋಜನೆಯನ್ನು ನಗರ ಪ್ರದೇಶಕ್ಕೆ ವಿಸ್ತರಿಸುತ್ತೇವೆ. ಆಶಾ ಕಾರ್ಯತರ್ಕರಿಗೆ ಸಂಭಾವನೆ ಹೆಚ್ಚಸಲಿದ್ದೇವೆ. ಗುತ್ತಿಗೆ ಪದ್ದತೆಯನ್ನು ರದ್ದು ಮಾಡುತ್ತೇವೆ. ಉದ್ಯೋಗ ಗ್ಯಾರೆಂಟಿ ಖಾಯಂ ಮಾಡುತ್ತೇವೆ ಎಂದು ಭರಸವೆ ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!