ಹೊಸದಿಗಂತ ವರದಿ,ವಿಜಯಪುರ:
ಆಟೋದಲ್ಲಿ ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ 1.28 ಲಕ್ಷ ರೂ.ಗಳ ಮೌಲ್ಯ 40 ಲೀಟರ್ ಶೇಂದಿ ಜಪ್ತಿ ಮಾಡಿ, ಅಬಕಾರಿ ಪೊಲೀಸರು ಆರೋಪಿಯನ್ನು ಬಂಧಿಸಿರುವ ಘಟನೆ ವಿಜಯಪುರ ತಾಲೂಕಿನ ಕರಾಡ ದೊಡ್ಡಿ ಕ್ರಾಸ್ ಬಳಿ ನಡೆದಿದೆ.
ನಗರದ ಶಿವಾಜಿ ವೃತ್ತದ ಬಳಿಯ ವಾಸು ಶಿವಾಜಿ ಘಾಟಗೆ ಬಂಧಿತ ಆರೋಪಿ.
ವಾಸು ಘಾಟಗೆ ಈತ ತನ್ನ ಆಟೋದಲ್ಲಿ ಅಕ್ರಮವಾಗಿ 1.28 ಲಕ್ಷ ರೂ.ಗಳ ಮೌಲ್ಯ 40 ಲೀಟರ್ ಶೇಂದಿ ಸಾಗಣೆ ಮಾಡುತ್ತಿದ್ದ ವೇಳೆ ಅಬಕಾರಿ ಪೊಲೀಸರು ದಾಳಿ ನಡೆಸಿ, ಶೇಂದಿ ಜಪ್ತಿ ಮಾಡಿ, ಅರೋಪಿಯನ್ನು ಬಂಧಿಸಿದ್ದಾರೆ.
ಅಬಕಾರಿ ಅಪರ ಆಯುಕ್ತ ಡಾ. ವೈ. ಮಂಜುನಾಥ, ಅಬಕಾರಿ ಜಂಟಿ ಆಯುಕ್ತ ಎಫ್.ಎಚ್. ಚಲವಾದಿ, ಅಬಕಾರಿ ಉಪ ಆಯುಕ್ತ ಮುರಳಿದರ, ಅಬಕಾರಿ ಉಪ ಅಧೀಕ್ಷಕ ಎಸ್.ಎನ್. ಹಿರೇಮಠ ಅವರ ಮಾರ್ಗದರ್ಶನದಲ್ಲಿ ಅಬಕಾರಿ ಉಪ ವಿಭಾಗ ನಿರೀಕ್ಷಕ ಮಹಾದೇವ ಪೂಜಾರಿ, ಅಬಕಾರಿ ಸಿಬ್ಬಂದಿಗಳಾದ ಪಿ.ಕೆ. ಕುಂಬಾರ, ಎಂ.ಎಲ್. ಪೂಜಾರಿ, ಯಲ್ಲಪ್ಪ ಭಜಂತ್ರಿ ತಂಡ ದಾಳಿ ನಡೆಸಿದೆ.