ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಸ್ಸಾಂ ಪೊಲೀಸರು ಕರೀಂಗಂಜ್ ಜಿಲ್ಲೆಯಲ್ಲಿ ಟ್ರಕ್ ಒಂದರಿಂದ 1.5 ಕೋಟಿ ರೂಪಾಯಿ ಮೌಲ್ಯದ ಭಾರೀ ಪ್ರಮಾಣದ ಗಾಂಜಾವನ್ನು ವಶಪಡಿಸಿಕೊಂಡಿದ್ದು, ಅಮಿತ್ ಕುಮಾರ್ ಎಂಬಾತನನ್ನು ಬಂಧಿಸಿದ್ದಾರೆ.
ಬಂದ ಮಾಹಿತಿಯ ಆಧಾರದ ಮೇಲೆ, ಚುರೈಬರಿ ಪೊಲೀಸ್ ವಾಚ್ ಪೋಸ್ಟ್‌ನ ಪೊಲೀಸ್ ತಂಡವು ಶನಿವಾರ ಸಂಜೆ ಅಸ್ಸಾಂ-ತ್ರಿಪುರಾ ಗಡಿಯುದ್ದಕ್ಕೂ ಅಸ್ಸಾಂನ ಕರೀಂಗಂಜ್ ಜಿಲ್ಲೆಯ ಚುರೈಬರಿ ಪ್ರದೇಶದಲ್ಲಿ ನೋಂದಣಿ ಸಂಖ್ಯೆ HP-17E-9474 ಅನ್ನು ಹೊಂದಿರುವ ಟ್ರಕ್ ಅನ್ನು ತಡೆದಿದೆ.
ಶೋಧನೆಯ ಸಮಯದಲ್ಲಿ, ನಾವು ಟ್ರಕ್ ನಿಂದ ಸುಮಾರು 8.6 ಕೆಜಿ ತೂಕದ 94 ಗಾಂಜಾ ಪ್ಯಾಕೆಟ್‌ಗಳನ್ನು ವಶಪಡಿಸಿಕೊಂಡಿದ್ದೇವೆ. ನಾವು ಹಿಮಾಚಲ ಪ್ರದೇಶದ ಅಮಿತ್ ಕುಮಾರ್ ಎಂಬ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದೇವೆ. ಟ್ರಕ್ ತ್ರಿಪುರಾದ ಅಗರ್ತಲಾದಿಂದ ಬಿಹಾರ ಕಡೆಗೆ ಬರುತ್ತಿತ್ತು. ವಶಪಡಿಸಿಕೊಂಡ ಗಾಂಜಾ ಸುಮಾರು 1.5 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ ಎಂದು ಕರೀಂಗಂಜ್ ಜಿಲ್ಲೆಯ ಪೊಲೀಸ್ ಅಧಿಕಾರಿ ಪ್ರಣಬ್ ಮಿಲಿ ಹೇಳಿದ್ದಾರೆ.