ಹೊಸದಿಗಂತ ಡಿಜಿಟಲ್ ಡೆಸ್ಕ್
ಪಂಜಾಬ್ ನಲ್ಲಿ ನೂತನವಾಗಿ ರಚನೆಯಾಗಿರುವ ಭಗವಂತ್ ಮಾನ್ ಸರ್ಕಾರದ ಸಚಿವರಾಗಿ 10 ಶಾಸಕರು ಶನಿವಾರ ಪ್ರಮಾಣವಚನ ಸ್ವೀಕರಿಸಿದರು.
ಇತ್ತೀಚೆಗೆ ನಡೆದ ರಾಜ್ಯದ ವಿಧಾನಸಬಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಆಮ್ ಆದ್ಮಿ ಪಕ್ಷ ಪಂಜಾಬ್ ನಲ್ಲಿ ಸರ್ಕಾರ ರಚಿಸಿದೆ. ಮುಖ್ಯಮಂತ್ರಿಯಾಗಿ ಮಾನ್ ಇದೇ ಮಾರ್ಚ್ 16 ರಂದು ಪ್ರಮಾನವಚನ ಸ್ವೀಕರಿಸಿದ್ದರು.
ಹರ್ಪಾಲ್ ಸಿಂಗ್ ಚೀಮಾ, ಡಾ ಬಲ್ಜಿತ್ ಕೌರ್, ಹರ್ಭಜನ್ ಸಿಂಗ್, ಡಾ.ವಿಜಯ್ ಸಿಂಗ್ಲಾ, ಲಾಲ್ ಚಂದ್ ಕತರುಚಕ್, ಗುರ್ಮೀತ್ ಸಿಂಗ್, ಕುಲದೀಪ್ ಸಿಂಗ್ ಧಲಿವಾಲ್, ಲಾಲ್ಜಿತ್ ಸಿಂಗ್ ಭುಲ್ಲರ್, ಬ್ರಹ್ಮ ಶಂಕರ್ (ಜಿಂಪಾ), ಹರ್ಜೋತ್ ಸಿಂಗ್ ಬೈನ್ಸ್ ಅವರು ಚಂಡೀಗಢದ ರಾಜಭವನದಲ್ಲಿಸಚಿವರಾಗಿ ಪ್ರತಿಜ್ಞಾ ವಿಧಿ ಸ್ವೀಕರಿಸಿದ್ದಾರೆ.
ಪಂಜಾಬ್ ವಿಧಾನಸಭೆಯ 117 ಸ್ಥಾನಗಳಿಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಅರವಿಂದ ಕೇಜ್ರಿವಾಲ್ ನೇತೃತ್ವದ ಎಎಪಿಯ 92 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದು, ಬಹುಮತದ ಸರ್ಕಾರ ರಚಿಸಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ