ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಾಗತಿಕವಾಗಿಯೂ ಪ್ರಧಾನಿ ನರೇಂದ್ರ ಮೋದಿ ಅವರು ಖ್ಯಾತಿ ಹೊಂದಿದ್ದಾರೆ. ಅ ಮೋದಿ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಕೋಟ್ಯಂತರ ಫಾಲೋವರ್‌ಗಳನ್ನು ಹೊಂದಿದ್ದಾರೆ. ಈ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಫಾಲೋವರ್‌ಗಳನ್ನು ಹೊಂದುವಲ್ಲಿ ಹೊಸ ಮೈಲಿಗಲ್ಲು ನೆಟ್ಟಿದ್ದಾರೆ.
ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ನರೇಂದ್ರ ಮೋದಿ ಅವರ ಫಾಲೋವರ್‌ಗಳ ಸಂಖ್ಯೆ 100 ದಶಲಕ್ಷ ದಾಟಿದ್ದು (10 ಕೋಟಿ), ಜಗತ್ತಿನಲ್ಲೇ ಎಕ್ಸ್‌ನಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ನಾಯಕ ಎನಿಸಿದ್ದಾರೆ.
ನರೇಂದ್ರ ಮೋದಿ ಅವರೀಗ ಜಗತ್ತಿನಲ್ಲೇ ಅತಿ ಹೆಚ್ಚು ಫಾಲೋವರ್‌ಗಳನ್ನು ಹೊಂದಿರುವ ನಾಯಕ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ. ಮೋದಿ ನಂತರದ ಸ್ಥಾನದಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್ 3.81 ಕೋಟಿ, ದುಬೈನ ಶೇಖ್ ಮೊಹಮ್ಮದ್ 1.12 ಕೋಟಿ ಫಾಲೋವರ್‌ಗಳನ್ನು ಹೊಂದಿದ್ದಾರೆ. ಇನ್ನು ಪೋಪ್ ಫ್ರಾನ್ಸಿಸ್ ಅವರು 1.85 ಕೋಟಿ ಫಾಲೋವರ್‌ಗಳನ್ನು ಹೊಂದಿದ್ದಾರೆ. ಜಗತ್ತಿನ ಯಾವುದೇ ದೇಶದ ಪ್ರಧಾನಿ ಅಥವಾ ಅಧ್ಯಕ್ಷರು ಜಾಗತಿಕವಾಗಿ ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಫಾಲೋವರ್‌ಗಳಿಗಿಂತ ಮೋದಿ ಅವರು ಹೆಚ್ಚು ಫಾಲೋವರ್‌ಗಳನ್ನು ಹೊಂದಿದ್ದಾರೆ.
ಜಾಗತಿಕ ಮಟ್ಟದಲ್ಲಿ ಜನಪ್ರಿಯತೆಯಲ್ಲಿಯೂ ಪ್ರಧಾನಿ ಮೋದಿ ಅವರು ನಂಬರ್ 1 ಆಗಿದ್ದಾರೆ. ಜನಪ್ರಿಯತೆಯ ಸಮೀಕ್ಷೆ ನಡೆಸಿ ಪಟ್ಟಿ ಮಾಡುವ ಸಂಸ್ಥೆ ಇಪ್ಸೋಸ್ ಇಂಡಿಯಾಬಸ್ (Ipsos IndiaBus) ಪ್ರಕಾರ, ಪ್ರಧಾನಿ ಮೋದಿ ಫೆಬ್ರವರಿ 2024ರಲ್ಲಿ ಶೇಕಡಾ 75ರಷ್ಟು ಅನುಮೋದನೆ ರೇಟಿಂಗ್ ಅನ್ನು ಸಾಧಿಸಿದ್ದಾರೆ. ಸೆಪ್ಟೆಂಬರ್ 2023ರಲ್ಲಿ ಬಿಡುಗಡೆಯಾದ ಡೇಟಾದಲ್ಲಿ, ಪಿಎಂ ಮೋದಿ 65 ಪ್ರತಿಶತದಷ್ಟು ರೇಟಿಂಗ್ ಪಡೆದಿದ್ದರು. ಈ ಬಾರಿ ಅವರ ಅನುಮೋದನೆ ರೇಟಿಂಗ್ ಶೇಕಡಾ 10ರಷ್ಟು ಹೆಚ್ಚಾಗಿದೆ.