ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾನುವಾರ ಬೆಳಗಿನ ಜಾವ ಸಂಭವಿಸಿದ ಪ್ರಬಲ ಭೂಕಂಪನದಲ್ಲಿ ಕನಿಷ್ಟ 21ಮಂದಿ ಗಾಯಗೊಂಡಿರುವ ಘಟನೆ ಚೀನಾದಲ್ಲಿ ನಡೆದಿದೆ.
ಶಾಂಡೋಂಗ್ ಪ್ರಾಂತ್ಯದ ಡೆಝೌ ನಗರದಲ್ಲಿ ಭಾನುವಾರ ಬೆಳಗಿನ ಜಾವ ಸ್ಥಳೀಯ ಸಮಯ 2:33ಕ್ಕೆ, 5.5 ತೀವ್ರತೆಯ ಭೂಕಂಪ ಸಂಭವಿಸಿರುವುದಾಗಿ ಭೂಕಂಪನ ರಾಷ್ಟ್ರೀಯ ಕೇಂದ್ರ ಸ್ಪಷ್ಟಪಡಿಸಿದೆ. ದಕ್ಷಿಣಕ್ಕೆ 26 ಕಿಲೋಮೀಟರ್ ದೂರದಲ್ಲಿ 10 ಕಿಲೋಮೀಟರ್ ಆಳದಲ್ಲಿ ಭೂಕಂಪದ ಕೇಂದ್ರ ಬಿಂದು ಗೋಚರಿಸಿದೆ.
ಪರಿಣಾಮದಿಂದಾಗಿ 74 ಮನೆಗಳು ಕುಸಿದಿವೆ, 21 ಮಂದಿಗೆ ಗಾಯಗಳಾಗಿದ್ದು, 10 ಮಂದಿ ನಾಪತ್ತೆಯಾಗಿದ್ದಾರೆ. ಮಲಗಿದ್ದ ಜನ ಕಂಪಿಸಿದ ಶಬ್ದ ಕೇಳಿ ಹೊರಗಡೆ ಓಡಿಬಂದಿದ್ದಾರೆ. ಬೇರೆ ದಾರಿಯಿಲ್ಲದೇ ರಾತ್ರಿಯಿಡೀ ರಸ್ತೆ ಬದಿ ವನವಾಸ ಮಾಡಬೇಕಾಯಿತು.
ಇದಕ್ಕೂ ಮುನ್ನ, ಶನಿವಾರ ಅಫ್ಘಾನಿಸ್ತಾನದಲ್ಲಿ 5.8 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ವರದಿಯಾಗಿದೆ.ಈ ಭೂಕಂಪದಲ್ಲಿ ಯಾವುದೇ ಪ್ರಾಣಹಾನಿ ಅಥವಾ ವಸ್ತು ಹಾನಿಯಾದ ಬಗ್ಗೆ ವರದಿಯಾಗಿಲ್ಲ.