ಹೊಸದಿಗಂತ ಡಿಜಿಟಲ್ ಡೆಸ್ಕ್:
ಶನಿವಾರ ಮಧ್ಯರಾತ್ರಿ ಕಾರೊಂದು ಕಾಲುವೆಗೆ ಉರುಳಿದ ಘಟನೆ ಪೂರ್ವ ಗೋದಾವರಿ ಜಿಲ್ಲೆಯಲ್ಲಿ ನಡೆದಿದೆ. ಘಟನೆಯಲ್ಲಿ ಒಬ್ಬರು ಸಾವನ್ನಪ್ಪಿದ್ದು, ಇನ್ನಿಬ್ಬರು ನಾಪತ್ತೆಯಾಗಿದ್ದಾರೆ. ಕಣ್ಮರೆಯಾದವರಿಗಾಗಿ ಶೋಧ ಮುಂದುವರಿದಿದೆ.
ಮರೇಡುಮಿಲ್ಲಿಯಿಂದ ಏಲೂರಿಗೆ ಹೋಗುತ್ತಿದ್ದಾಗ ಕೋರುಕೊಂಡ ಮಂಡಲದ ಬೋರುಗುಪುಡಿಯಲ್ಲಿ ಕಾರು ಮೋರಿ ಮೇಲೆ ಹೋಗಿ ಕಾಲುವೆಗೆ ಅಪ್ಪಳಿಸಿದೆ. ಈ ವೇಳೆ ಕಾರಿನಲ್ಲಿ ಆರು ಮಂದಿ ಇದ್ದರು ಎನ್ನಲಾಗಿದೆ. ಅಪಘಾತದದಿಂದ ಮೂವರು ಪಾರಾಗಿದ್ದು, ಸುರಕ್ಷಿತವಾಗಿ ದಡ ತಲುಪಿದರು. ನಾಪತ್ತೆಯಾದವರಲ್ಲಿ ಒಬ್ಬನ ಶವ ಪತ್ತೆಯಾಗಿದೆ. ಅಪಘಾತದ ಮಾಹಿತಿ ತಿಳಿದ ಕೂಡಲೇ ಪೊಲೀಸರು ಹಾಗೂ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ, ಕ್ರೇನ್ ಮೂಲಕ ರಕ್ಷಣಾ ಕಾರ್ಯಾಚರಣೆ ಕೈಗೊಂಡರು.
ಇವರೆಲ್ಲರೂ ಇಂಜಿನಿಯರಿಂಗ್ ವಿದ್ಯಾರ್ಥಿಗಳಾಗಿದ್ದು, 19-20 ವರ್ಷ ವಯಸ್ಸಿನವರು.
ಉಳಿದ ಇಬ್ಬರಿಗಾಗಿ ಶೋಧ ಕಾರ್ಯ ಆರಂಭಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಮೋರಿ ಹತ್ತುವಾಗ ಕಾರು ನಿಯಂತ್ರಣ ತಪ್ಪಿ ಕಾಲುವೆಗೆ ಉರುಳಿದೆ ಎಂದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ. ಕಾಲುವೆ ಆಳವಾಗಿದ್ದರಿಂದ ಕಾರು ಸಂಪೂರ್ಣ ಮುಳುಗಡೆಯಾಗಿತ್ತು. ಪೊಲೀಸರು ಕ್ರೇನ್ ಸಹಾಯದಿಂದ ಕಾರನ್ನು ಹೊರ ತೆಗೆದಿದ್ದಾರೆ.
ಅಪಘಾತದಲ್ಲಿ ಪ್ರಣೀತ್, ವಂಶಿ ಮತ್ತು ಹೇಮಂತ್ ಸುರಕ್ಷಿತವಾಗಿ ಪಾರಾಗಿದ್ದಾರೆ. ಉದಯ್ ಕಿರಣ್ ಎಂಬ ವಿದ್ಯಾರ್ಥಿ ಸಾವನ್ನಪ್ಪಿದ್ದು, ಆತನ ಶವ ಪತ್ತೆಯಾಗಿದೆ. ಟಿ.ಹೇಮಂತ್ ಮತ್ತು ಹರ್ಷವರ್ಧನ್ ನಾಪತ್ತೆಯಾಗಿದ್ದಾರೆ. ಅವರಿಗಾಗಿ ಹುಡುಕಾಡ ಮುಂದುವರಿದಿದೆ.