ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೂ ಮುನ್ನ 10 ಕೆ.ಜಿ ಅಕ್ಕಿ ನೀಡುವುದಾಗಿ ಭರವಸೆ ನೀಡಿದ್ದರು. ಇಂಥ ಗ್ಯಾರೆಂಟಿಗಳನ್ನು ಗಟ್ಟಿಯಾಗಿ ನಂಬಿದ ಜನ ವೋಟ್ ಮಾಡಿ ಸಿದ್ದು ಸರ್ಕಾರಕ್ಕೆ ಜೀವ ಕೊಟ್ಟಿದ್ದಾರೆ. ಇದೀಗ ಜನರ ನಂಬಿಕೆಗೆ ಸಿದ್ದರಾಮಯ್ಯ ಸರ್ಕಾರ ಮೋಸ ಮಾಡಲು ಹೊರಟಿದೆ ಇದನ್ನು ಸಹಿಸುವುದಿಲ್ಲ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಎಲ್ಲವೂ ಸರಿಯಾಗಿದೆ ಎನ್ನುವಂತಿದ್ದು ಕಡೆ ಘಳಿಗೆಯಲ್ಲಿ ಅಕ್ಕಿ ಇಲ್ಲ ಎಂದರೆ ಏನರ್ಥ? ಬಡವರಿಗೆ ಇದು ನಂಬಿಕೆ ದ್ರೋಹ ಅಲ್ಲವೇ ಎಂದು ಪ್ರಶ್ನಿಸಿದ್ದಾರೆ. ಸುಮ್ಮನೆ ಕೇಂದ್ರ ಕೊಡುತ್ತಿಲ್ಲ ಎಂದು ಹೇಳಿ ಕೈತೊಳೆದುಕೊಂಡು ಬಿಟ್ಟರೆ? ಕೇಂದ್ರದ ಜೊತೆ ಹಿಂದೆಯೇ ಚರ್ಚೆ ಮಾಡಬೇಕಿತ್ತು. ಸರ್ಕಾರಕ್ಕೆ ಪತ್ರ ಬರೆಯಬೇಕಿತ್ತು. ದೂರವಾಣಿಯಲ್ಲಿ ಮಾತನಾಡಬಹುದಿತ್ತು ಆದರೆ ಸಿಎಂ ಸಿದ್ದರಾಮಯ್ಯ ಇದ್ಯಾವುದನ್ನೂ ಮಾಡಿಲ್ಲ.10 ಕೆ.ಜಿ ಅಕ್ಕಿ ಕೊಡಿ ಇಲ್ಲವಾದರೆ ಅಷ್ಟು ಹಣವನ್ನು ಜನರ ಅಕೌಂಟ್‌ಗೆ ಹಾಕಿ ಎಂದು ಬೊಮ್ಮಾಯಿ ಆಗ್ರಹಿಸಿದ್ದಾರೆ.