ಹೊಸದಿಗಂತ ಡಿಜಿಟಲ್ ಡೆಸ್ಕ್:
ವಲಸಿಗರನ್ನು ಹೊತ್ತೊಯ್ಯುತ್ತಿದ್ದ ಬಸ್ ಪಲ್ಟಿಯಾದ ಪರಿಣಾಮ 10 ಮಂದಿ ಸಾವು, 25 ಜನರಿಗೆ ಗಾಯಗಳಾಗಿರುವ ಘಟನೆ ಗ್ವಾಟೆಮಾಲಾ ಗಡಿಯ ಸಮೀಪ ದಕ್ಷಿಣ ಮೆಕ್ಸಿಕೊದ ಹೆದ್ದಾರಿಯಲ್ಲಿ ಸಂಭವಿಸಿದೆ.
ಅಪಘಾತಗೊಂಡ ಟ್ರಕ್ 27 ವಲಸಿಗರನ್ನು ಹೊತ್ತೊಯ್ಯುತ್ತಿತ್ತು. ಚಾಲಕ ಅತಿ ವೇಗವಾಗಿ ವಾಹನ ಚಲಾಯಿಸಿದ ಪರಿಣಾಮ ನಿಯಂತ್ರಣ ತಪ್ಪಿ ಟ್ರಕ್ ಪಲ್ಟಿಯಾಗಿ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ. ಅಪಘಾತದ ಬಳಿಕ ಚಾಲಕ ಪರಾರಿಯಾಗಿದ್ದಾನೆ.
ಮೃತಪಟ್ಟ ವಲಸಿಗರೆಲ್ಲರೂ ಕ್ಯೂಬಾದ ಮಹಿಳೆಯರಾಗಿದ್ದು, ಒಬ್ಬ ಬಾಲಕಿಯೂ ಇದರಲ್ಲಿ ಸೇರಿದ್ದಾಳೆ ಎಂದು ರಾಷ್ಟ್ರೀಯ ವಲಸೆ ಸಂಸ್ಥೆ ತಿಳಿಸಿದೆ.
ಗ್ವಾಟೆಮಾಲನ್ ಗಡಿಯಿಂದ ಸುಮಾರು 175 ಕಿಲೋಮೀಟರ್ ದೂರದಲ್ಲಿರುವ ಪಿಜಿಜಿಯಾಪಾನ್ ಪಟ್ಟಣದ ಸಮೀಪವಿರುವ ಹೆದ್ದಾರಿಯಲ್ಲಿ ಭಾನುವಾರ ಈ ಅಪಘಾತ ಸಂಭವಿಸಿದೆ ಚಿಯಾಪಾಸ್ ರಾಜ್ಯದ ನಾಗರಿಕ ರಕ್ಷಣಾ ಕಚೇರಿ ಮಾಹಿತಿ ನೀಡಿದೆ.