ಹೊಸದಿಗಂತ ಡಿಜಿಟಲ್ ಡೆಸ್ಕ್:
ದರೋಡೆ ನಡೆದ ಕೇವಲ ಹತ್ತೇ ನಿಮಿಷದಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ದರೋಡೆಕೋರನ ಬೆನ್ನಟ್ಟಿ ಹಿಡಿದಿದ್ದಾರೆ.
ಹೌದು, ಮಂಗಳೂರಿನ ಪೊಲೀಸ್ ವರುಣ್ ಅವರು ದರೋಡೆ ಮಾಡಿ ತಪ್ಪಿಸಿಕೊಂಡು ಓಡಿಹೋಗುತ್ತಿದ್ದ ಅಪರಾಧಿಯನ್ನು ಬೆನ್ನಟ್ಟಿ ಹತ್ತೇ ನಿಮಿಷದಲ್ಲಿ ಹಿಡಿದಿದ್ದಾರೆ. ಸಿಟಿ ಏರಿಯಾದಲ್ಲೇ ದರೋಡೆ ಮಾಡಿ ಓಡಿಹೋಗುತ್ತಿದ್ದ ಆರೋಪಿಯನ್ನು ಚೇಸ್ ಮಾಡಿ, ಬೀಳಿಸಿ, ಹಿಡಿದಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪೊಲೀಸ್ ವರುಣ್ ಕಾರ್ಯಕ್ಕೆ ಜನ ಮೆಚ್ಚುಗೆ ವ್ಯಕ್ತಪಡಿಸಿ ಹ್ಯಾಟ್ಸ್‌ಆಫ್ ಎನ್ನುತ್ತಿದ್ದಾರೆ.
Robbery offender cought within 10 mins of offence by chasing him though the city. Hats off to varun Mangalore city police.
ಮಂಗಳೂರಿನಲ್ಲಿ ಘಟನೆ ನಡೆದ 10 ನಿಮಿಷದಲ್ಲಿ ರಾಬರಿ ಪ್ರಕರಣದ ಆರೋಪಿಯನ್ನು ಮಂಗಳೂರಿನ ಪೊಲೀಸ್ ವರುಣ್ ರವರು ಬೆನ್ನಟ್ಟಿ ಹಿಡಿದಿದ್ದು. pic.twitter.com/SqmzVv77Cj
— Shashi Kumar CP mangaluru (@ShashiK85532199) January 13, 2022