Wednesday, November 30, 2022

Latest Posts

10 ಬಾರಿಯ ಶಾಸಕ ಮೋಹನ್‌ಸಿನ್ಹ್ ರಥ್ವಾ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರ್ಪಡೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಗುಜರಾತ್ ವಿಧಾನಸಭಾ ಚುನಾವಣಾ ಕಣ ದಿನೇ ಕಳೆದಂತೆ ರಂಗೇರುತ್ತಿದ್ದು, ಗೆಲುವಿಗಾಗಿ ರಾಜಕೀಯ ಪಕ್ಷಗಳು ರಣತಂತ್ರ ರೂಪಿಸುತ್ತಿದ್ದು, ಈ ನಡುವೆ ಕಾಂಗ್ರೆಸ್ ಗೆ 10 ಬಾರಿ ಶಾಸಕರಾಗಿದ್ದ ಮೋಹನ್‌ಸಿನ್ಹ್ ರಥ್ವಾ ಪಕ್ಷ ತೊರೆಯುವ ಮೂಲಕ ಶಾಕ್ ನೀಡಿದ್ದರು.
ಈ ರೀತಿ ಪಕ್ಷ ತೊರೆದಿದ್ದ ಮೋಹನ್‌ಸಿನ್ಹ್ ರಥ್ವಾ ಇಂದು ಬಿಜೆಪಿ (BJP) ಸೇರ್ಪಡೆಗೊಂಡಿದ್ದಾರೆ.
ಬುಡಕಟ್ಟು ಸಮುದಾಯದ ಪ್ರಭಾವಿನಾಯಕರಾಗಿರುವ ಋಥ್ವಾ 2012ಕ್ಕೂ ಛೋಟಾ ಉದಯಪುರ ಜಿಲ್ಲೆಯ ಪಾವಿ-ಜೆಟ್ಪುರ್ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಈ ಬಾರಿ ಚುನಾವಣೆಯಲ್ಲಿ ತಾನು ಸ್ಪರ್ಧಿಸುತ್ತಿಲ್ಲ ಎಂಬುದಾಗಿ ಘೋಷಿಸಿದ್ದು, ಅವರ ಮಗ ರಾಜೇಂದ್ರಸಿನ್ಹ್ ರಥ್ವಾ ಅವರ ಸ್ಥಾನದಿಂದ ಸ್ಪರ್ಧಿಸಲಿದ್ದಾರೆ ಎಂದು ಘೋಷಿಸಿದ್ದಾರೆ.
ಇತ್ತ ಬಿಜೆಪಿಯಿಂದ ತನ್ನ ಮಗನಿಗೆ ಟಿಕೆಟ್ ಸಿಗುವ ನಿರೀಕ್ಷೆಯಲ್ಲಿ ಮೋಹನ್‌ಸಿನ್ಹ್ ರಥ್ವಾ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!