100 ಕೋ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಸಂತ ರವಿದಾಸ್ ದೇವಾಲಯಕ್ಕೆ ‘ಭೂಮಿ ಪೂಜೆ’ ನೆರವೇರಿಸಿದ ಪ್ರಧಾನಿ ಮೋದಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ 14ನೇ ಶತಮಾನದ ಅನುಭವಿ ಕವಿ ಮತ್ತು ಸಮಾಜ ಸುಧಾರಕ ಸಂತ ರವಿದಾಸ್ ಅವರಿಗೆ ಸಮರ್ಪಿತವಾದ 11.25 ಎಕರೆ ಪ್ರದೇಶದಲ್ಲಿ, 100 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಲಾಗುವ ದೇವಾಲಯಕ್ಕೆ ಪ್ರಧಾನಿ ನರೇಂದ್ರ ಮೋದಿ ಭೂಮಿ ಪೂಜೆ ನೆರವೇರಿಸಿದರು.

ಬಳಿಕ ಪ್ರಧಾನಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು.

ವರ್ಷಾಂತ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವ ಬಿಜೆಪಿ ಆಡಳಿತದ ರಾಜ್ಯಕ್ಕೆ ಕೇವಲ ಒಂದು ತಿಂಗಳಲ್ಲಿ ಪ್ರಧಾನಿ ಅವರ ಎರಡನೇ ಭೇಟಿ ಇದಾಗಿದೆ.

ಪ್ರಧಾನಿಯವರ rally ಮತ್ತು ಸಂತ ರವಿದಾಸ್ ಗೆ ಸಮರ್ಪಿತವಾದ ದೇವಾಲಯದ ಶಿಲಾನ್ಯಾಸ ಸಮಾರಂಭದಲ್ಲಿ 2 ಲಕ್ಷ ಜನರು ಭಾಗವಹಿಸುವ ನಿರೀಕ್ಷೆಯಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!