ಹೊಸದಿಗಂತ ಡಿಜಿಟಲ್ ಡೆಸ್ಕ್:
44 ಬಿಲಿಯನ್ ಡಾಲರುಗಳಿಗೆ ಜನಪ್ರಿಯ ಸಾಮಾಜಿಕ ಮಾಧ್ಯಮ ಟ್ವಿಟರನ್ನು ಖರೀದಿಸಿರುವ ಬಿಲಿಯನೇರ್ ಎಲಾನ್ ಮಸ್ಕ್ ಇದೀಗ ಟ್ವೀಟರ್ ಆದಾಯವನ್ನು ಹೆಚ್ಚಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಟ್ವಿಟರ್ ನಲ್ಲಿ ಪರಿಶೀಲಿಸಿದ ಅಕೌಂಟ್ ಸೇವೆಯಲ್ಲಿ ಬ್ಲೂಟಿಕ್ ಗೆ ಈಗಾಗಲೇ ಶುಲ್ಕ ವಿಧಿಸಲಾಗಿದ್ದು ಇದೀಗ ವ್ಯಾಪಾರ ಸಂಬಂಧಿ ಖಾತೆಗಳಿಗೆ ಹೆಚ್ಚಿನ ಶುಲ್ಕ ವಿಧಿಸುವುದಾಗಿ ಟ್ವೀಟರ್ ಘೋಷಿಸಿದೆ.
ಸಾಮಾನ್ಯ ವೈಯುಕ್ತಿಕ ಖಾತೆಗಳಿಗೆ ʼಬ್ಲೂಟಿಕ್ʼ ನೀಡುವಂತೆ ಬಿಸ್ನೆಸ್ ಅಕೌಂಟ್ ಗಳಿಗೆ ʼಗೋಲ್ಡ್ ಟಿಕ್ʼ ನೀಡಲಾಗುತ್ತದೆ. ಈ ಗೋಲ್ಡ್ ಟಿಕ್ ಪಡೆಯಲು ಗ್ರಾಹಕರು ಇನ್ನು ಮುಂದೆ ಬರೋಬ್ಬರಿ 1,000 ಡಾಲರ್ ಶುಲ್ಕ ಪಾವತಿಸಬೇಕಾಗುತ್ತದೆ. ಒಂದು ಖಾತೆಯೊಂದಿಗೆ ಸಂಯೋಜನೆಗೊಂಡ ಬೇರೆ ಬೇರೆ ಖಾತೆಗಳಿಗೆ ಪ್ರತಿ ಖಾತೆಗೆ ಹೆಚ್ಚುವರಿಯಾಗಿ 50 ಡಾಲರ್ ಶುಲ್ಕ ವಿಧಿಸಲಾಗುತ್ತದೆ. ಈ ಕುರಿತು ಎಲಾನ್ ಮಸ್ಕ್ ಟ್ವಿಟರ್ ಕಂಪನಿಯ ಟ್ವೀಟೊಂದನ್ನು ಹಂಚಿಕೊಂಡಿದ್ದು ಏಪ್ರಿಲ್ 1 ರಿಂದ ಈ ನಿಯಮ ಜಾರಿಗೆ ಬರಲಿದೆ ಎಂದು ಹೇಳಿದ್ದಾರೆ.
Any individual person’s Twitter account affiliated with a verified organization is automatically verified https://t.co/5j6gx6UKHm
— Elon Musk (@elonmusk) March 24, 2023