ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕದಿಂದ ಗಡಿಪಾರುಗೊಂಡ 104 ಭಾರತೀಯ ಪ್ರಜೆಗಳನ್ನು ಹೊತ್ತ ಅಮೆರಿಕದ ಮಿಲಿಟರಿ ಸಿ -17 ವಿಮಾನವು ಇಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಅಮೃತಸರ ವಿಮಾನ ನಿಲ್ದಾಣಕ್ಕೆ ಬಂದು ಇಳಿಯಿತು.
ಮಂಗಳವಾರ ಮಧ್ಯಾಹ್ನ ಟೆಕ್ಸಾಸ್‌ನ ಸ್ಯಾನ್ ಆಂಟೋನಿಯೊದಿಂದ ಹೊರಟ ಈ ವಿಮಾನದಲ್ಲಿ 11 ಸಿಬ್ಬಂದಿ ಮತ್ತು 45 ಅಮೆರಿಕದ ಅಧಿಕಾರಿಗಳು ಇದ್ದರು. ಮೂಲಗಳ ಪ್ರಕಾರ ಗುಜರಾತ್ ಮತ್ತು ಹರಿಯಾಣ ಮೂಲದವರು ತಲಾ 33 ಜನರಿದ್ದಾರೆ. 30 ಜನರು ಪಂಜಾಬ್, ತಲಾ ಇಬ್ಬರು ಪ್ರಯಾಣಿಕರು ಉತ್ತರ ಪ್ರದೇಶ ಮತ್ತು ಚಂಡೀಗಢದವರು, ಮೂವರು ಮಹಾರಾಷ್ಟ್ರ ಮೂಲದವರು ಎಂದು ತಿಳಿದು ಬಂದಿದೆ.