ಮರಳಿ ಭಾರತಕ್ಕೆ ಬಂತು 105 ಪುರಾತನ ವಸ್ತುಗಳು: ಅಮೆರಿಕಕ್ಕೆ ಧನ್ಯವಾದ ತಿಳಿಸಿದ ಪ್ರಧಾನಿ ಮೋದಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತಕ್ಕೆ ಕಳ್ಳಸಾಗಣೆ ಮೂಲಕ ಅಮೆರಿಕ ಪಾಲಾಗಿದ್ದ 105 ಪುರಾತನ ವಸ್ತುಗಳನ್ನು ಹಿಂದಿರುಗಿಸಿರುವ ಅಮೆರಿಕ ಸರಕಾರಕ್ಕೆ ಪ್ರಧಾನಿ ನರೇಂದ್ರ ಮೋದಿ (narendra modi) ಅವರು ಇಂದು ಧನ್ಯವಾದ ತಿಳಿಸಿದ್ದಾರೆ.

ವಾಷಿಂಗ್ಟನ್ ಡಿಸಿಯಲ್ಲಿರುವ ಭಾರತೀಯ ರಾಯಭಾರಿ ಕಚೇರಿಗೆ ಪುರಾತನ ವಸ್ತುಗಳನ್ನು ಅಮೇರಿಕ ಸರಕಾರ ಹಸ್ತಾಂತರಿಸಿದೆ.
ಈ ಕುರಿತು ಟ್ವೀಟ್ ಮಾಡಿ ಖುಷಿ ಹಂಚಿಕೊಂಡ ಮೋದಿ, ಇದು ಪ್ರತಿಯೊಬ್ಬ ಭಾರತೀಯನು ಸಂತೋಷ ಪಡುವ ವಿಷಯ. ಇದಕ್ಕಾಗಿ ನಾನು ಯುಎಸ್ಎಗೆ ಕೃತಜ್ಞನಾಗಿದ್ದೇನೆ. ಈ ಅಮೂಲ್ಯ ಕಲಾಕೃತಿಗಳು ಅಪಾರ ಸಾಂಸ್ಕೃತಿಕ ಮತ್ತು ಧಾರ್ಮಿಕ ಮಹತ್ವವನ್ನು ಹೊಂದಿವೆ. ಇದೀಗ ಮತ್ತೆ ಈ ಪುರಾತನ ವಸ್ತುಗಳು ನಮ್ಮ ಮನೆಗೆ ಮರುಳುತ್ತಿದೆ. ನಮ್ಮ ಸಂರಕ್ಷಿಸುವ ನಮ್ಮ ಬದ್ಧತೆಗೆ ಪ್ರಮುಖ ಅಡಿಪಾಯ. ಇದು ನಮ್ಮ ಪರಂಪರೆ ಮತ್ತು ಶ್ರೀಮಂತ ಇತಿಹಾಸಕ್ಕೆ ಸಾಕ್ಷಿ” ಎಂದು ಹೇಳಿದ್ದಾರೆ.

ಸೋಮವಾರ ನ್ಯೂಯಾರ್ಕ್‌ನ ಕಾನ್ಸುಲೇಟ್‌ನಲ್ಲಿ ನಡೆದ ಸಮಾರಂಭದಲ್ಲಿ ಅಮೆರಿಕದ ಅಧಿಕಾರಿಗಳು ಭಾರತದ ಪುರಾತನ ವಸ್ತುಗಳನ್ನು ಅಮೆರಿಕದಲ್ಲಿರುವ ಭಾರತದ ರಾಯಭಾರ ಕಚೇರಿ ಅಧಿಕಾರಿಗಳಿಗೆ ಹಸ್ತಾಂತರಿಸಿದರು.

ಅಮೆರಿಕದ ರಾಯಭಾರಿ ಕಚೇರಿ ಟ್ವೀಟ್ ಮಾಡಿದ್ದೂ, ಭಾರತದ ವೈವಿಧ್ಯಮಯ ಪ್ರದೇಶಗಳು ಮತ್ತು ಸಂಪ್ರದಾಯಗಳನ್ನು ಪ್ರತಿನಿಧಿಸುವ 105 ಪ್ರಾಚೀನ ವಸ್ತುಗಳು, ಮತ್ತೆ ಸ್ವದೇಶಕ್ಕೆ ಹಿಂದಿರುಗುತ್ತಿವೆ.! ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಐತಿಹಾಸಿಕ ಅಮೆರಿಕ ಭೇಟಿಯ ಅನುಸರಣೆಯಾಗಿ US ಕಡೆಯಿಂದ ಈ ಪ್ರಾಚೀನ ಕಲಾಕೃತಿಗಳನ್ನು ಹಸ್ತಾಂತರಿಸಲಾಗುತ್ತಿದೆ. ಈ ಪ್ರಾಚೀನ ವಸ್ತುಗಳು, ಕ್ರಿ.ಶ. 2 ನೇ ಶತಮಾನದಷ್ಟು ಹಿಂದಿನದು. ಮತ್ತು ಇದು ಹಳೆಯ ಸಾಂಸ್ಕೃತಿಕ ಮತ್ತು ಧಾರ್ಮಿಕ ಪರಂಪರೆಯನ್ನು ಒಳಗೊಂಡಿದೆ ಎಂದು ತಿಳಿಸಿದೆ.

ಪುರಾತನ ವಸ್ತುಗಳಲ್ಲಿ 14-15ನೇ ಶತಮಾನದ್ದು ಎಂದು ಹೇಳಲಾಗಿದೆ. ರಾಜಸ್ಥಾನದ 12-13ನೇ ಶತಮಾನದ ಅಮೃತಶಿಲೆಯ ಕಮಾನು ಎಂಬುದನ್ನು ಕೂಡ ಗುರುತಿಸಲಾಗಿದೆ. ಮಧ್ಯ ಭಾರತದ ಅಪ್ಸರಾ, ದಕ್ಷಿಣ ಭಾರತದ 14-15 ನೇ ಶತಮಾನದ ಸಂಬಂದರ್ ಮತ್ತು ದಕ್ಷಿಣ ಭಾರತದ 17-18 ನೇ ಶತಮಾನದ ಕಂಚಿನ ನಟರಾಜ ಕಲಾಕೃತಿಯನ್ನು ಗುರುತಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!