ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಂಗಳವಾರ ಮುಂಜಾನೆ 108 ಆ್ಯಂಬುಲೆನ್ಸ್ ನಲ್ಲಿ ಗರ್ಭಿಣಿ ಮಹಿಳೆ ಮಗುವಿಗೆ ಜನ್ಮ ನೀಡಿದ ಘಟನೆ ಉಡುಪಿಯ ಬ್ರಹ್ಮಾವರ ತಾಲೂಕಿನ ಶಿರೂರು ಮುದ್ದುಮನೆ ಗ್ರಾಮದಲ್ಲಿ ನಡೆದಿದೆ.
ಕೊಕ್ಕರ್ಣೆಯ 108 ಆಂಬ್ಯುಲೆನ್ಸಿಗೆ ಬಂದ ಕರೆಯನ್ನು ಸ್ವೀಕರಿಸಿದ ಸಿಬ್ಬಂದಿ, ಬ್ರಹ್ಮಾವರ ತಾಲ್ಲೂಕಿನ ಶಿರೂರು ಮುದ್ದುಮನೆ ಗ್ರಾಮಕ್ಕೆ ತೆರಳಿದ್ದಾರೆ. ರೇಖಾ (25) ಗರ್ಭಿಣಿಯನ್ನು ಆಂಬುಲೆನ್ಸ್ ನಲ್ಲಿ ಕರೆದೊಯ್ಯುವಾಗ ದಾರಿ ಮಧ್ಯೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
108 ಆ್ಯಂಬುಲೆನ್ಸ್ ನ ಶುಶ್ರೂಕರಾದ ಪರಮೇಶ್ವರ ಚೇಲವಾದಿ ಮತ್ತು ಚಾಲಕ ಚಂದ್ರಪ್ಪ ಕರ್ತವ್ಯ ನಿರ್ವಹಿಸಿದ್ದು, ತಾಯಿ ಮತ್ತು ಮಗುವನ್ನು ಸಮುದಾಯ ಆರೋಗ್ಯ ಕೇಂದ್ರ ಬ್ರಹ್ಮಾವರಕ್ಕೆ ದಾಖಲಾಗಿದೆ. ಇಬ್ಬರು ಆರೋಗ್ಯವಾಗಿದ್ದಾರೆ ಎಂದು ವೈದ್ಯಾಧಿಕಾರಿ ತಿಳಿಸಿದ್ದಾರೆ.