109 ಹೆರಾಯಿನ್ ಕ್ಯಾಪ್ಸುಲ್​ ನುಂಗಿ ಸ್ಮಗ್ಲಿಂಗ್ ಮಾಡಲು ಯತ್ನ: ಕಸ್ಟಮ್ಸ್​​ ಅಧಿಕಾರಿಗಳ ಬಲೆಗೆ ಆರೋಪಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಹೈದರಾಬಾದ್​​ನ ಶಂಶಾಬಾದ್​ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 109 ಹೆರಾಯಿನ್ ಕ್ಯಾಪ್ಸುಲ್​ ನುಂಗಿ ಸ್ಮಗ್ಲಿಂಗ್​ ಮಾಡಲು ಹೋಗಿ ಓರ್ವ ಕಸ್ಟಮ್ಸ್​​ ಅಧಿಕಾರಿಗಳಿಂದ ಬಂಧನಕ್ಕೊಳಗಾಗಿದ್ದಾನೆ.
ತಾಂಜಾನಿಯಾ ನಿವಾಸಿ ಏಪ್ರಿಲ್ 26ರಂದು ಜೊಹಾನ್ಸ್​ಬರ್ಗ್​​ನಿಂದ ಹೈದರಾಬಾದ್​ಗೆ ಬಂದಿದ್ದರು. ಈ ವೇಳೆ ಈತನ ಮೇಲೆ ಅನುಮಾನ ವ್ಯಕ್ತಪಡಿಸಿದ ಕಸ್ಟಮ್ಸ್​ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದರು. ವೈದ್ಯಕೀಯ ತಪಾಸಣೆಗೊಳಪಡಿಸಿದಾಗ ಆತನ ಹೊಟ್ಟೆಯಿಂದ ಸುಮಾರು 109 ಹೆರಾಯಿನ್​ ಕ್ಯಾಪ್ಸುಲ್​ ಹೊರತೆಗೆಯಲಾಗಿದೆ.
ಇನ್ನು ಇದಕ್ಕೆ ವೈದ್ಯರು ಸುಮಾರು ಆರು ದಿನ ತೆಗೆದುಕೊಂಡಿದ್ದಾರೆ. ವ್ಯಕ್ತಿಯ ಹೊಟ್ಟೆಯಲ್ಲಿ ಸುಮಾರು 1,389 ಗ್ರಾಂ ಹೆರಾಯಿನ್ ಹೊರತೆಗೆಯಲಾಗಿದ್ದು, ಇದರ ಒಟ್ಟು ಮೌಲ್ಯ 11.53 ಕೋಟಿ ರೂ. ಎಂದು ತಿಳಿದು ಬಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!