ಸೋಷಿಯಲ್ ಮೀಡಿಯಾ ಜೇಬಿಗೆ 11 ಬಿಲಿಯನ್ ಡಾಲರ್: ಕೊಡಿಸಿದ್ದು ಯಾರು ಗೊತ್ತಾ!!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಿಮಗೆ ಗೊತ್ತಾ, ಯುವ ಸಮುದಾಯದ ಬಳಕೆದಾರಿಂದಲೇ 2022ನೇ ಇಸವಿಯಲ್ಲಿ ಸಾಮಾಜಿಕ ಜಾಲತಾಣಗಳು ಬರೋಬ್ಬರಿ 11 ಬಿಲಿಯನ್ ಡಾಲರ್ ಗಳಿಸಿವೆ!

ಹೌದು, ಅಮೆರಿಕದಲ್ಲಿ ನಡೆದ ಅಧ್ಯಯನವೊಂದು ಈ ಮಾಹಿತಿ ಬಹಿರಂಗಗೊಳಿಸಿದೆ.
ವರದಿಯ ಪ್ರಕಾರ, ಸ್ನ್ಯಾಪ್‌ಚಾಟ್, ಟಿಕ್‌ಟಾಕ್, ಯೂಟ್ಯೂಬ್ ಗಳಿಸಿದ ಆದಾಯದಲ್ಲಿ ಶೇಕಡಾ 30ರಿಂದ 40 ರಷ್ಟು ಜಾಹೀರಾತು ಆದಾಯ ಯುವ ಬಳಕೆದಾರರ ಕಾರಣದಿಂದಾಗಿ ಬಂದಿದೆ. 12 ವರ್ಷ ಹಾಗೂ ಅದಕ್ಕಿಂತ ಕಡಿಮೆ ವಯಸ್ಸಿನ ಬಳಕೆದಾರರ ಕಾರಣಕ್ಕೆ 1 ಬಿಲಿಯನ್ ಡಾಲರ್ ಜಾಹಿರಾತು ವರಮಾನ ಗಳಿಸಿ ಯೂಟ್ಯೂಬ್ ಮುಂದಿದೆ.

ಇನ್ನು 13 ರಿಂದ 17 ವರ್ಷ ವಯಸ್ಸಿನ ನಡುವಿನ ಬಳಕೆದಾರರ ಕಾರಣದಿಂದ 4 ಬಿಲಿಯನ್ ಡಾಲರ್ ವರಮಾನ ಗಳಿಸಿ ಇನ್‌ಸ್ಟಾಗ್ರಾಂ ಕಂಪನಿ ಮುಂದಿದೆ. ಈ ಅಧ್ಯಯನವನ್ನು ಹಾರ್ವರ್ಡ್ ವಿಶ್ವವಿದ್ಯಾಲಯದ ಹಾರ್ವರ್ಡ್ ಟಿಎಚ್ ಚಾನ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ನಡೆಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!