ಮೂರನೇ ಮಗು ಪಡೆದರೆ 11 ಲಕ್ಷ ರೂ. ಬಹುಮಾನ, ಪತ್ನಿಗೆ ಒಂದು ವರ್ಷ, ಪತಿಗೆ 9 ತಿಂಗಳು ವೇತನ ಸಹಿತ ರಜೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಹೆಚ್ಚುತ್ತಿರುವ ಜನಸಂಖ್ಯೆಯಿಂದ ಉಂಟಾಗುವ ಸಮಸ್ಯೆಗಳನ್ನುಕಂಟ್ರೋಲ್‌ ಮಾಡಿದ್ದ ಜನಸಂಖ್ಯೆಯ ನಂ.1 ದೇಶವಾಗಿರುವ ಚೀನಾ ಇದೀಗ ತನ್ನ ತನ್ನ ವ್ಯಾಖ್ಯಾನ ಬದಲಿಸಿದೆ.
ಹೌದು, ಈ ಹಿಂದೆ ಚೀನಾ ಒಂದು ಮಗುವು ಸಾಕು ಎಂದುಕಟ್ಟುನಿಟ್ಟಿನ ನಿಯಮ ಜಾರಿ ತಂದಿದ್ದು, ಇದನ್ನು ತಪ್ಪಿದವರಿಗೆ ಕಠಿಣ ಶಿಕ್ಷೆಯನ್ನು ಹೇಳಿತ್ತು. ಇದರಿಂದ ಅನೇಕ ಜನರು ಒಂದೇ ಮಗುವನ್ನು ಮಾಡಿಕೊಂಡಿದ್ದಾರೆ. ಈ ಮೂಲಕ ಚೀನಾದ ಜನಸಂಖ್ಯೆ ಪ್ರಮಾಣ ಕುಸಿದಿತ್ತು.
2019ರಲ್ಲಿ ಇದ್ದ 140 ಕೋಟಿ ಜನಸಂಖ್ಯೆಗೆ ಹೋಲಿಸಿದರೆ ಕಳೆದ ಒಂದು ವರ್ಷದಲ್ಲಿ ದೇಶದ ಜನಸಂಖ್ಯೆಯಲ್ಲಿ ಕೇವಲ 1 ಕೋಟಿಯಷ್ಟು ಮಾತ್ರವೇ ಏರಿಕೆ ಆಗಿದೆ. ಇದರಿಂದ
ಮುಂಬರುವ ವರ್ಷಗಳಲ್ಲಿ ಕಾರ್ಮಿಕರ ಸಮಸ್ಯೆ ಹಾಗೂ ಖರೀದಿ ಸಾಮರ್ಥ್ಯ ಇಳಿಕೆ ಆಗುವ ಅಪಾಯ ಎದುರಾಗಲಿದೆ ಎಂದು ಯೋಚಿಸಿರುವ ಚೀನಾ ಸರ್ಕಾರ ಇದೀಗ ಮೂರನೇ ಮಗುವನ್ನು ಪಡೆಯಲು ದಂಪತಿಗೆ ಉತ್ತೇಜನ ನೀಡುತ್ತಿದೆ.
ಹೀಗಾಗಿ ಚೀನಾದ ರಾಜಧಾನಿ ಬೀಜಿಂಗ್‌ನ ದಬೆನಾಂಗ್ ಟೆಕ್ನಾಲಜಿ ಗ್ರೂಪ್ ಎಂಬ ಖಾಸಗಿ ಸಂಸ್ಥೆ ತಮ್ಮ ಉದ್ಯೋಗಿಗಳಿಗೆ ಆಫರ್ ನೀಡಿದ್ದು, ತಮ್ಮಲ್ಲಿ ಕೆಲಸ ಮಾಡುವ ಪುರುಷ ಅಥವಾ ಮಹಿಳಾ ಉದ್ಯೋಗಿಗಳು ಮೂರನೇ ಮಗು ಪಡೆದರೆ , ಬರೋಬ್ಬರಿ 90 ಸಾವಿರ ಯುವಾನ್ ನಗದು ಹಣ ಅಂದರೆ, ಭಾರತೀಯ ರೂಪಾಯಿ ಲೆಕ್ಕದಲ್ಲಿ 11 ಲಕ್ಷ ರೂಪಾಯಿಗಳ ಪ್ರೋತಾಹ ಧನ ನೀಡಲಾಗುತ್ತದೆ ಎಂದು ಹೇಳಿದೆ.
ಮಾತ್ರವಲ್ಲದೇ ಆಕರ್ಷಕ ರಜೆಯನ್ನು ನೀಡಲು ಕಂಪನಿ ನಿರ್ಧರಿಸಿದೆ. ಕಂಪನಿಯು ತನ್ನ ಮಹಿಳಾ ಉದ್ಯೋಗಿಗಳು 3ನೇ ಮಗು ಪಡೆದರೆ ಒಂದು ವರ್ಷ ವೇತನ ಸಹಿತ ರಜೆ ನೀಡುತ್ತದೆ. ಇನ್ನು ಪುರುಷ ಉದ್ಯೋಗಿಗಳಿಗೆ ಒಂಬತ್ತು ತಿಂಗಳು ವೇತನ ಸಹಿತ ರಜೆಯನ್ನು ಕೂಡಾ ನೀಡುತ್ತಿದೆ.
1980ರಲ್ಲಿ ಒಂದೇ ಮಗು ಎಂಬ ನೀತಿಯನ್ನು ಜಾರಿಗೆ ತಂದಿದ್ದ ಚೀನಾ , ಮೇ 2021ರಲ್ಲಿ ಚೀನಾ ಮೂರು ಮಕ್ಕಳ ನೀತಿಯನ್ನು ಪರಿಚಯಿಸಿತ್ತು. ಇದೀಗ ಅದನ್ನು ಉತ್ತೇಚಿಸಲು ಸರ್ಕಾರವೇ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!