ಇಸ್ರೇಲ್‌ನಲ್ಲಿ ದಾಳಿ : 11 ಪ್ಯಾಲೆಸ್ತೀನಿಯರ ಸಾವು, 100ಕ್ಕೂ ಹೆಚ್ಚು ಮಂದಿ ಗಾಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಇಸ್ರೇಲ್-ಜೋರ್ಡಾನ್ ಗಡಿಯಲ್ಲಿರುವ ವೆಸ್ಟ್ ಬ್ಯಾಂಕ್ ನಗರದಲ್ಲಿ ಬುಧವಾರ ಇಸ್ರೇಲ್‌ ಸೇನೆಯು ನಡೆಸಿದ ದಾಳಿಯಲ್ಲಿ ಕನಿಷ್ಠ 11 ಮಂದಿ ಪ್ಯಾಲೆಸ್ತೀನಿಯರು ಮೃತಪಟ್ಟಿದ್ದಾರೆ ಮತ್ತು 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಪಶ್ಚಿಮ ದಂಡೆಯ ಉತ್ತರ ಭಾಗದ ನಬ್ಲುಸ್‌ ಎಂಬಲ್ಲಿ ಈ ದಾಳಿ ನಡೆದಿದೆ ಎಂದು ಪ್ಯಾಲೇಸ್ಟಿನಿಯನ್ ಆರೋಗ್ಯ ಸಚಿವಾಲಯವು ಹೇಳಿದೆ.

ವರದಿಯ ಪ್ರಕಾರ, ಪ್ಯಾಲೆಸ್ತೀನ್ ಭಯೋತ್ಪಾದಕರು ಮತ್ತು ಇಸ್ರೇಲ್ ಸೇನೆಯ ನಡುವೆ ಗುರುವಾರ ಬೆಳಿಗ್ಗೆ ಮೂರು ಗಂಟೆಗಳ ಕಾಲ ಭೀಕರ ಕಾಳಗ ನಡೆದಿತ್ತು. ಈ ವೇಳೆ ಜೆನಿನ್ ನಿರಾಶ್ರಿತರ ಶಿಬಿರದಲ್ಲಿ ಭಾರೀ ಗುಂಡಿನ ದಾಳಿ ಮತ್ತು ಸ್ಫೋಟಗಳು ಸಂಭವಿಸಿವೆ.

ಕಳೆದ ತಿಂಗಳು ಜೆರುಸಲೇಂ ಪ್ರಾರ್ಥನಾ ಮಂದಿರದ ಬಳಿಯೂ ಇದೇ ರೀತಿಯ ದಾಳಿ ನಡೆದಿತ್ತು. ಈ ಸಂದರ್ಭ ನಮ್ಮ ತಾಳ್ಮೆಯ ಕಟ್ಟೆ ಒಡೆದಿದೆ ಎಂದು ಹಮಾಸ್ ಭಯೋತ್ಪಾದಕ ಸಂಘಟನೆ ಹೇಳಿತ್ತು.

ಭಯೋತ್ಪಾದಕರ ಚಟುವಟಿಕೆ ತೀವ್ರವಾಗಿರುವ ಹಿನ್ನೆಲೆಯಲ್ಲಿ ನಬ್ಲುಸ್‌ ನಗರದಲ್ಲಿ ಈ ದಾಳಿ ನಡೆಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!