ಹೊಸದಿಗಂತ ವರದಿ ವಿಜಯಪುರ:
ಇಲ್ಲಿನ ಮಲ್ಲಿಕಾರ್ಜುನ ನಗರದ ಮನೆಯೊಂದರಲ್ಲಿ 12.5 ತೊಲೆ ಚಿನ್ನಾಭರಣ, 1 ಲಕ್ಷ ರೂ. ನಗದು, ಒಂದು ಕಾರು ಕಳ್ಳತನವಾಗಿರುವ ಘಟನೆ ನಡೆದಿದೆ.
ಇಲ್ಲಿನ ಗೀತಾ ಮಲ್ಲನಗೌಡ ಬಿರಾದಾರ ಎಂಬರ ಮನೆಯಲ್ಲಿ ಕಳ್ಳತನವಾಗಿದ್ದು, ನಗದು, ಚಿನ್ನಾಭರಣ ಸೇರಿ ಕಾರೊಂದನ್ನು ಕಳ್ಳರು ಕದ್ದು ಪರಾರಿಯಾಗಿದ್ದಾರೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.