ಮಣಿಪುರದಲ್ಲಿ ಉಗ್ರರು ನಿರ್ಮಿಸಿದ್ದ 12 ಬಂಕರ್‌ಗಳನ್ನು ನಾಶಪಡಿಸಿದ ಭದ್ರತಾಪಡೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಜನಾಂಗೀಯ ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಕಳೆದ 24 ಗಂಟೆಗಳಲ್ಲಿ ವಿವಿಧ ಜಿಲ್ಲೆಗಳಲ್ಲಿ ಉಗ್ರರು ನಿರ್ಮಿಸಿದ್ದಾರೆ ಎನ್ನಲಾದ 12 ಬಂಕರ್‌ಗಳನ್ನು ಪೊಲೀಸರು ಮತ್ತು ಕೇಂದ್ರ ಭದ್ರತಾ ಪಡೆಗಳು ನಾಶಪಡಿಸಿದ್ದಾರೆ ಎಂದು ಪೊಲೀಸ್​ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

ಮಣಿಪುರ ರಾಜ್ಯ ಪೊಲೀಸರು ಮತ್ತು ಕೇಂದ್ರ ಭದ್ರತಾ ಪಡೆಗಳು ತಮೆಂಗ್‌ಲಾಂಗ್, ಇಂಫಾಲ್ ಪೂರ್ವ, ಬಿಷ್ಣುಪುರ್, ಕಾಂಗ್‌ಪೋಕ್ಪಿ, ಚುರಾಚಂದ್‌ಪುರ ಮತ್ತು ಕಾಕ್‌ಚಿಂಗ್ ಜಿಲ್ಲೆಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದು, ಬೆಟ್ಟ ಮತ್ತು ಕಣಿವೆಯಲ್ಲಿ ಉಗ್ರರು ನಿರ್ಮಿಸಿದ್ದ 12 ಬಂಕರ್‌ಗಳನ್ನು ನಾಶಪಡಿಸಲಾಗಿದೆ ಎಂದು ಮಣಿಪುರ ಪೊಲೀಸರು ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಶೋಧ ಕಾರ್ಯಾಚರಣೆ ವೇಳೆ ಸಾಹುಂಫೈ ಗ್ರಾಮದ ಗದ್ದೆಯಲ್ಲಿ ಮೂರು 51 ಎಂಎಂ ಗಾರೆ ಶೆಲ್‌ಗಳು ಮತ್ತು ಮೂರು 84 ಎಂಎಂ ಗಾರೆ ಶೆಲ್‌ಗಳು ಮತ್ತು ಕಾಂಗ್ವೈ ಮತ್ತು ಎಸ್. ಕೋಟ್ಲಿಯನ್ ಗ್ರಾಮಗಳ ನಡುವಿನ ಗದ್ದೆಯಲ್ಲಿ ಒಂದು ಐಇಡಿ ಪತ್ತೆಯಾಗಿದೆ. ರಾಜ್ಯ ಬಾಂಬ್ ನಿಷ್ಕ್ರಿಯ ತಂಡವು ಸ್ಥಳದಲ್ಲಿ ಮಾರ್ಟರ್ ಶೆಲ್‌ಗಳು ಮತ್ತು ಐಇಡಿಯನ್ನು ನಾಶಗೊಳಿಸಿದೆ ಎಂದು ಪೊಲೀಸರು ನೀಡಿರುವ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.

ಮೀಸಲಾತಿಗಾಗಿ ನಡೆದ ಪ್ರತಿಭಟನಾ ಯಾತ್ರೆ ವೇಳೆ ಆರಂಭವಾದ ಗಲಾಟೆ, ಇಡಿ ರಾಜ್ಯದಲ್ಲಿ ಉದ್ವಿಗ್ನ ವಾತಾವರಣಕ್ಕೆ ಕಾರಣವಾಗಿದೆ. ಕಳೆದ ಒಂದು ತಿಂಗಳಿನಿಂದ ಹಿಂಚಾಸಾರ ಮುಂದುವರಿದೆ. ಪೊಲೀಸರು ಪರಿಸ್ಥಿತಿಯನ್ನ ನಿಯಂತ್ರಿಸಲು ಹರಸಾಹಸ ಪಡುತ್ತಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಅಲ್ಲಿನ ಪೊಲೀಸರು, ಮಣಿಪುರದಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದ್ದರೂ ಕೆಲವು ಸ್ಥಳಗಳಲ್ಲಿ ಹಿಂಸಾಚಾರ ಸ್ವಲ್ಪ ಮಟ್ಟಿಗೆ ನಿಯಂತ್ರಣಕ್ಕೆ ಬಂದಿದೆ. ಕರ್ಫ್ಯೂ ಉಲ್ಲಂಘನೆ, ಮನೆಗಳಲ್ಲಿ ಕಳ್ಳತನ, ಬೆಂಕಿ ಹಚ್ಚಿದ ಪ್ರಕರಣಗಳಿಗೆ ಸಂಬಂಧಿಸಿದಂತೆ 135 ಜನರನ್ನು ಅರೆಸ್ಟ್‌ ಮಾಡಲಾಗಿದೆ ಎಂದು ಪೊಲೀಸರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ರಾಜ್ಯದಲ್ಲಿನ ಪರಿಸ್ಥಿತಿಯನ್ನು ಸಹಜ ಸ್ಥಿತಿಗೆ ತರಲು ಸಾಧ್ಯ ಇರುವ ಎಲ್ಲ ಸಹಕಾರವನ್ನು ನೀಡುವಂತೆ ಪೊಲೀಸರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!