July 14, 2026
Tuesday, July 14, 2026
spot_img

ನೀಲಿ ಚಿತ್ರ ನೋಡಿ ಒಂಬತ್ತು ತಿಂಗಳ ಮಗು ಮೇಲೆ ಅತ್ಯಾ*ಚಾರ ಎಸಗಿದ 12 ವರ್ಷದ ಬಾಲಕ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಒಂಬತ್ತು ತಿಂಗಳ ಮಗುವಿನ ಮೇಲೆ 12 ವರ್ಷದ ಬಾಲಕನೊಬ್ಬ ಅತ್ಯಾಚಾರ ಎಸಗಿರುವ ಆಘಾತಕಾರಿ, ಮನುಕುಲವೇ ನಾಚಿಕೆ ಪಡುವಂಥ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

ಗೋರಖ್‌ಪುರ ಜಿಲ್ಲೆಯ ಗುಲರಿಹಾ ಠಾಣಾ ವ್ಯಾಪ್ತಿಯಲಿ ಈ ಘಟನೆ ನಡೆದಿದೆ. ಅಮ್ಮನ ಪಕ್ಕ ಮಲಗಿದ್ದ ಒಂಬತ್ತು ತಿಂಗಳ ಕಂದಮ್ಮ ಕಾಣೆಯಾಗಿತ್ತು. ಪೋಷಕರು ಇಡೀ ಊರಿನಲ್ಲಿ ಹುಡುಕಾಟ ಆರಂಭಿಸಿದ್ದರು. ಒಂದು ದಿನದ ನಂತರ ಮಗು ಮನೆಯ ಸಮೀಪದ ಜಮೀನಿನ ಬಳಿ ದೊರಕಿದೆ. ತಕ್ಷಣ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ವೈದ್ಯಕೀಯ ಪರೀಕ್ಷೆಯಲ್ಲಿ ಮಗುವಿನ ಮೇಲೆ ಅತ್ಯಾಚಾರ ಆಗಿರುವುದು ದೃಢಪಟ್ಟಿದೆ. ಮಗುವಿನ ಆರೋಗ್ಯ ಸ್ಥಿತಿಯೂ ಗಂಭೀರವಾಗಿದ್ದು, ವೈದ್ಯರು ಕೆಲ ಸಮಯ ಯಾವುದೇ ಮಾಹಿತಿ ನೀಡಲು ಆಗುವುದಿಲ್ಲ ಎಂದು ಹೇಳಿದ್ದಾರೆ. ಮಗುವಿನ ಪೋಷಕರು ಬಾಲಕನ ವಿರುದ್ಧ ದೂರು ನೀಡಿದ್ದು, ಸದ್ಯ ಬಾಲಕ ಪೊಲೀಸರ ವಶದಲ್ಲಿದ್ದಾನೆ.

ಮೂರು ದಿನಗಳ ಹಿಂದೆ ಚಂಡೀಗಢದಿಂದ ಬಾಲಕನೊಬ್ಬ ಊರಿಗೆ ಬಂದಿದ್ದ. ಆತನ ಮೇಲೆ ಪೋಷಕರಿಗೆ ಅನುಮಾನವಿತ್ತು. ಪೊಲೀಸರು ವಿಚಾರಣೆ ನಡೆಸಿದ ವೇಳೆ ತಾನು ಅತ್ಯಾಚಾರ ಮಾಡಿದ್ದಾಗ ಬಾಲಕ ಒಪ್ಪಿಕೊಂಡಿದ್ದಾನೆ. ಬಾಲಕನ ಫೋನ್‌ನಲ್ಲಿ ಅಶ್ಲೀಲ ವಿಡಿಯೋಗಳು, ಆತ ನೀಲಿ ಚಿತ್ರಗಳನ್ನು ನೋಡಿರುವುದು ಪತ್ತೆಯಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !