Sunday, October 1, 2023

Latest Posts

ಐಪಿಎಲ್ ಮೆಗಾ ಹರಾಜಿಗೆ 896 ಭಾರತೀಯರು ಸಹಿತ 1214 ಆಟಗಾರರು ನೋಂದಣಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಇಂಡಿಯನ್ ಪ್ರೀಮಿಯರ್ ಲೀಗ್​ನ ಮೆಗಾ ಹರಾಜಿಗೆ 896 ಭಾರತೀಯರು ಸಹಿತ ಒಟ್ಟು 1214 ಕ್ರಿಕೆಟಿಗರು ತಮ್ಮ ಹೆಸರುಗಳನ್ನು ನೋಂದಣಿ ಮಾಡಿಕೊಂಡಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಬಿಸಿಸಿಐ ,ಫೆಬ್ರವರಿ 11 ಮತ್ತು 12 ರಂದು ಮೆಗಾ ಹರಾಜು ನಡೆಯಲಿದ್ದು, 10 ತಂಡಗಳಲ್ಲಿ ಖಾಲಿಯಿರುವ 217 ಸ್ಥಾನಗಳಿಗೆ 1,214 ಆಟಗಾರರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಭಾರತದಿಂದ 896, 318 ವಿದೇಶಿ ಆಟಗಾರರು ಇದ್ದಾರೆ.
ಭಾರತ ತಂಡದಲ್ಲಿ ಆಡಿರುವ 61 ಮತ್ತು 209 ಅಂತಾರಾಷ್ಟ್ರೀಯ ಕ್ರಿಕೆಟ್​ ಪ್ರತಿನಿಧಿಸಿರುವ ಆಟಗಾರರಿದ್ದಾರೆ. 692 ಅನ್​ಕಾಪ್ಡ್​ ಭಾರತೀಯರು ಮತ್ತು 62 ಅನ್​ಕ್ಯಾಪ್ಡ್​ ವಿದೇಶಿ ಆಟಗಾರರು ಮೆಗಾಹರಾಜಿಗೆ ನೋಂದಾಯಿಸಿಕೊಂಡಿದ್ದಾರೆ.
ಇನ್ನು ಪ್ರತಿಯೊಂದು ಫ್ರಾಂಚೈಸಿ ಗರಿಷ್ಠ 25 ಆಟಗಾರನ್ನು ಹೊಂದಲು ಅವಕಾಶವಿದ್ದು, ಹರಾಜಿನಲ್ಲಿ 70 ವಿದೇಶಿ ಆಟಗಾರರು ಸೇರಿದಂತೆ 217 ಆಟಗಾರರಿಗೆ ಮಾತ್ರ ಐಪಿಎಲ್​ನಲ್ಲಿ ಆಡುವ ಅದೃಷ್ಠ ಸಿಗಲಿದೆ.

ಯಾವ ಯಾವ ರಾಷ್ಟ್ರದ ವಿದೇಶಿ ಆಟಗಾರರು
ಅಫ್ಘಾನಿಸ್ತಾನ 20, ಆಸ್ಟ್ರೇಲಿಯಾ 59, ಬಾಂಗ್ಲಾದೇಶ 9, ಇಂಗ್ಲೆಂಡ್​ 30, ನ್ಯೂಜಿಲ್ಯಾಂಡ್​ 29, ದಕ್ಷಿಣ ಆಫ್ರಿಕಾ 48, ಶ್ರೀಲಂಕಾ 36, ವೆಸ್ಟ್ ಇಂಡೀಸ್​ 41, ನೇಪಾಳ 15, ಐರ್ಲೆಂಡ್ 3, ಜಿಂಬಾಬ್ವೆ 2, ನಮೀಬಿಯಾ 5,ಅಮೆರಿಕ 14, ಒಮಾನ್, ಯುಎಇ, ಸ್ಕಾಟ್ಲೆಂಡ್​ ಮತ್ತು ಭೂತಾನ್​​ ತಲಾ ಒಬ್ಬ ಆಟಗಾರರು ನೋಂದಾಯಿಸಿಕೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!