ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ಸರ್ಕಾರದ ಪ್ರಮುಖ ಗ್ಯಾರೆಂಟಿಯಾದ ಶಕ್ತಿ ಯೋಜನೆ ಅನ್ವಯ ಎಲ್ಲಾ ಮಹಿಳೆಯರಿಗೂ ಪ್ರಯಾಣ ಉಚಿತವಾಗಿದೆ.
ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರು ಉಚಿತ ಪ್ರಯಾಣಕ್ಕಾಗಿ ವಿತರಿಸಲಾದ ಶೂನ್ಯ ಟಿಕೆಟ್ ದರ 687,79,57,753 ರೂ. ಆಗಿದ್ದು, ಈ ಮೊತ್ತದ ಒಂದು ಪಾಲು ಅಥವಾ ಮೊದಲ ಕಂತನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ.
ಈಗಾಗಲೇ ಶಕ್ತಿ ಯೋಜನೆ ಆರಂಭವಾಗಿ ಎರಡು ತಿಂಗಳಾಗಿದೆ. ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಸೇರಿದಂತೆ ನಾಲ್ಕು ನಿಗಮಗಳಿಗೆ ಮೊದಲ ಕಂತಿನ ಹಣವಾಗಿ ಒಟ್ಟು 125.85 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ.
ಕೆಎಸ್‌ಆರ್‌ಟಿಸಿಗೆ 47.15 ಕೋಟಿ ರೂಪಾಯಿ, ಬಿಎಂಟಿಸಿ 21.85 ಕೋಟಿ ರೂ. ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ 23.57 ಕೋಟಿ ರೂ. ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಕ್ಕೆ 23,80 ಕೋಟಿ ರೂ. ಬಿಡುಗಡೆ ಮಾಡಲಾಗಿದೆ.