ಕಲುಷಿತ ನೀರು ಸೇವಿಸಿ ಅಪಾರ್ಟ್‌ಮೆಂಟ್​ನ 127 ಜನ ಅಸ್ವಸ್ಥ: ಬಯಲಾಯ್ತು ಅಸಲಿ ಕಾರಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಬೆಂಗಳೂರಿನ ಅಪಾರ್ಟ್‌ಮೆಂಟ್​​ನಲ್ಲಿ ಸೋಮವಾರದಂದು ಕಲುಷಿತ ​​ನೀರು ಕುಡಿದು 88 ಮಕ್ಕಳು ಸೇರಿದಂತೆ ಕನಿಷ್ಠ 127 ನಿವಾಸಿಗಳು ಅಸ್ವಸ್ಥಗೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ಯಾಂಕರ್ ನೀರು ಸೇವನೆಯಿಂದ ಅನಾಹುತ ಸಂಭವಿಸಿದೆ ಎಂದು ತಿಳಿದುಬಂದಿದೆ.

88 ಮಕ್ಕಳು ಸೇರಿದಂತೆ 127 ಜನರು ವಾಂತಿ-ಬೇಧಿಯಿಂದ ಬಳಲುತ್ತಿದ್ದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸದ್ಯ ಇಬ್ಬರು ಮಕ್ಕಳು ಹೊರತುಪಡಿಸಿ ಉಳಿದ ಮಕ್ಕಳು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.

ಆನೇಕಲ್​​ನ ಹೊಸ ರಸ್ತೆಯಲ್ಲಿರುವ 1,000 ಫ್ಲ್ಯಾಟ್‌ಗಳನ್ನು ಹೊಂದಿರುವ ಮಹಾವೀರ್ ರಾಂಚಸ್ ಅಪಾರ್ಟ್‌ಮೆಂಟ್ ಸಮುಚ್ಚಯದ ನಿವಾಸಿಗಳು ಅನಾರೋಗ್ಯದ ಬಗ್ಗೆ ದೂರು ನೀಡಿದ್ದರು. ಈ ಹಿನ್ನೆಲೆ ಬಿಬಿಎಂಪಿ ಆರೋಗ್ಯ ಇಲಾಖೆಯ ತಂಡವು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದ್ದರು.

ಬಿಬಿಎಂಪಿ ಅಧಿಕಾರಿಗಳ ಪ್ರಕಾರ, ಅಪಾರ್ಟ್‌ಮೆಂಟ್​​ ನಿರ್ಮಾಣ ಹಂತದಲ್ಲಿದ್ದು ಸೌಲಭ್ಯಗಳನ್ನು ಒದಗಿಸುವ ಬಗ್ಗೆ ಬಿಲ್ಡರ್ ಮತ್ತು ಅಪಾರ್ಟ್ಮೆಂಟ್ ಮಾಲೀಕರ ನಡುವೆ ವಿವಾದಗಳಿವೆ. ಅಪಾರ್ಟ್‌ಮೆಂಟ್‌ಗೆ ಖಾಸಗಿ ಟ್ಯಾಂಕರ್‌ಗಳ ಜೊತೆಗೆ ನಾಲ್ಕು ಬೋರ್‌ವೆಲ್‌ಗಳ ನೀರು ಕೂಡ ಬಳಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಪಾರ್ಟ್ ಮೆಂಟ್ ನ ಟ್ಯಾಂಕರ್ ನೀರು ಕಲುಷಿತಗೊಂಡಿದ್ದರಿಂದ ನೀರು ಸೇವಿಸಿದ ಅಪಾರ್ಟ್ ಮೆಂಟ್ ನಿವಾಸಿಗಳು ಅಸ್ವಸ್ಥರಾಗಿದ್ದಾರೆ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!