Tuesday, November 11, 2025

ದೆಹಲಿ ಬ್ಲಾಸ್ಟ್‌ | ವೈದ್ಯ ಉಮರ್‌ನ ತಾಯಿ, ಇಬ್ಬರು ಸಹೋದರರು ಸೇರಿ 13 ಮಂದಿ ವಶಕ್ಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಐತಿಹಾಸಿಕ ಕೆಂಪುಕೋಟೆ ಬಳಿ ನಡೆದ ಕಾರು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ ಉಗ್ರ ವೈದ್ಯ ಉಮರ್‌ನ ತಾಯಿ, ಇಬ್ಬರು ಸಹೋದರರು ಸೇರಿದಂತೆ 13 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಪುಲ್ವಾಮಾದಲ್ಲಿ ಉಮರ್‌ನ ಇಬ್ಬರು ಸಹೋದರರನ್ನು ವಶಕ್ಕೆ ಪಡೆಯಲಾಗಿದೆ. ಇನ್ನೂ ದೆಹಲಿಯ ಲಾಡ್ಜ್‌ಗಳ ಮೇಲೆ ದಾಳಿ ಮಾಡಿ ಕೆಲವು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

ಸುಮಾರು 12 ಮೊಬೈಲ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನೂ ಶಂಕಿತನ ಬಗ್ಗೆ ಮಾಹಿತಿ ಕಲೆಹಾಕಲು 200ಕ್ಕೂ ಹೆಚ್ಚು ಪೊಲೀಸರು 150ಕ್ಕೂ ಹೆಚ್ಚು ಸಿಸಿಟಿವಿಯನ್ನು ಪರಿಶೀಲಿಸುತ್ತಿದ್ದಾರೆ.

ಆರಂಭದಲ್ಲಿ ಅನಂತನಾಗ್ ಜಿಎಂಸಿಯಲ್ಲಿ ರೆಸಿಡೆಂಟ್ ಡಾಕ್ಟರ್ ಆಗಿ ಕೆಲಸ ಮಾಡಿದ್ದ ಉಮರ್, ಬಳಿಕ ದೆಹಲಿಗೆ ಹೋಗಿದ್ದ. ಸದ್ಯ ಫರೀದಾಬಾದ್‌ನ ಅಲ್ ಫಲಾಹ್ ಮೆಡಿಕಲ್ ಕಾಲೇಜಿನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದ. ಪೊಲೀಸರು ಅಲ್ ಫಲಾಹ್ ಕಾಲೇಜಿನ ಮೇಲೆ ಸಹ ದಾಳಿ ನಡೆಸಿದ್ದಾರೆ. ಅಲ್ಲದೇ ಧೌಜ್, ಫತೇಪುರ್ ತಗಾ ಗ್ರಾಮದಲ್ಲಿ ತನಿಖಾ ತಂಡಗಳು ಶೋಧ ಕಾರ್ಯ ನಡೆಸುತ್ತಿವೆ.

error: Content is protected !!