ಪ್ರಿಯಕರನನ್ನು ಭೇಟಿಯಾಗಲು ಬಂದ 13 ವರ್ಷದ ಬಾಲಕಿ: ಕಾಸರಗೋಡಿನಲ್ಲಿ ಪೊಲೀಸರ ವಶವಾದ ಪ್ರೇಮಿಗಳು

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಕೇರಳದ ಪತ್ತನಂತ್ತಿಟ್ಟ ಜಿಲ್ಲೆಯ ಅಡೂರು ಪರಿಸರದ ಮನೆಯಿಂದ ಕಾಸರಗೋಡು ರೈಲು ನಿಲ್ದಾಣಕ್ಕೆ ತನ್ನ ಪ್ರಿಯಕರನನ್ನು ಭೇಟಿಯಾಗಲು ಬಂದಿದ್ದ ೧೩ ವರ್ಷದ ಬಾಲಕಿಯನ್ನು ರೈಲ್ವೇ ಪೊಲೀಸರು ಕಸ್ಟಡಿಗೆ ತೆಗೆದು ಪೋಷಕರ ವಶಕ್ಕೆ ಒಪ್ಪಿಸಿದ ಘಟನೆ ನಡೆದಿದೆ.

ಕಾಸರಗೋಡು ಜಿಲ್ಲೆಯ ಪೊಯಿನಾಚಿ ನಿವಾಸಿಯಾದ ೨೧ ವರ್ಷದ ಯುವಕನೊಂದಿಗೆ ಕಳೆದ ಒಂದೂವರೆ ವರ್ಷಗಳಿಂದ ಇನ್‌ಸ್ಟಾಗ್ರಾಮ್ ಮೂಲಕ ಬಾಲಕಿಯು ಸಂಪರ್ಕದಲ್ಲಿದ್ದು, ಅವರಿಬ್ಬರು ಪ್ರೀತಿಸುತ್ತಿದ್ದರು.

ಅದರಂತೆ ಬಾಲಕಿಯು ಕಟ್ಟಡ ನಿರ್ಮಾಣ ಕೆಲಸಗಾರನಾದ ಆ ಯುವಕನೊಂದಿಗೆ ವಾಸಿಸಲು ಕಾಸರಗೋಡಿಗೆ ಆಗಮಿಸಿದ್ದಳು. ಬಾಲಕಿಯು ನಾಪತ್ತೆಯಾದ ನಂತರ ಕುಟುಂಬದವರು ಅಡೂರು ಪೊಲೀಸರಿಗೆ ದೂರು ನೀಡಿದ್ದರು. ಇದರ ನಂತರ ಮೊಬೈಲ್ ಫೋನ್ ಸ್ಥಳವನ್ನು ಪರಿಶೀಲಿಸಿದಾಗ ಬಾಲಕಿಯು ಮಲಬಾರ್ ಪ್ರದೇಶದಲ್ಲಿದ್ದಾಳೆಂದು ತಿಳಿದುಬಂತು. ಅಲ್ಲದೆ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಆಕೆ ಕಾಸರಗೋಡು ನಿಲ್ದಾಣಕ್ಕೆ ಸಮೀಪಿಸುತ್ತಿದ್ದಾಳೆ ಎಂಬುದು ಅರಿವಿಗೆ ಬಂತು. ಇದರೊಂದಿಗೆ ರೈಲ್ವೇ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಆಕೆಯ ಕುಟುಂಬ ನೀಡಿದ ಫೋಟೋದೊಂದಿಗೆ ರೈಲಿನಿಂದ ಇಳಿದ ಬಳಿಕ ಪೊಲೀಸರು ಬಾಲಕಿಯನ್ನು ಕಸ್ಟಡಿಗೆ ತೆಗೆದರು. ಈ ಮಧ್ಯೆ ಕಾಸರಗೋಡು ರೈಲು ನಿಲ್ದಾಣದಲ್ಲಿ ಕಾಯುತ್ತಿದ್ದ ಪ್ರಿಯತಮನನ್ನು ಪೊಲೀಸರು ಬಂಧಿಸಿದರು.

ಮೊಬೈಲ್ ಫೋನ್ ಬಳಸುವ ಬಗ್ಗೆ ಜಗಳವಾಡಿದ್ದರಿಂದ ಮನೆಯಿಂದ ಹೊರಗೆ ಹೋಗಿದ್ದೆ ಎಂದು ಬಾಲಕಿಯು ಪೊಲೀಸರಿಗೆ ತಿಳಿಸಿದ್ದಾಳೆ. ಅವರಿಬ್ಬರ ಫೋನ್‌ಗಳನ್ನು ಪರಿಶೀಲಿಸಲಾಯಿತು. ನಂತರ ಯುವಕನಿಗೆ ಎಚ್ಚರಿಕೆ ನೀಡಿ ಬಿಡುಗಡೆಗೊಳಿಸಲಾಯಿತು. ಅಲ್ಲದೆ ಬಾಲಕಿಗೆ ಬುದ್ಧಿಮಾತು ಹೇಳಿ ಆಕೆಯ ಮನೆಯವರೊಂದಿಗೆ ಕಳುಹಿಸಲಾಯಿತು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!