ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದಲ್ಲಿ ಇ-ರುಪಿಯನ್ನು ಪ್ರಾಯೋಗಿಕವಾಗಿ ಜಾರಿ ಮಾಡಲಾಗಿದ್ದು ಫೆ.28ರ ಅಂತ್ಯದ ವೇಳೆಗೆ 130 ಕೋಟಿ ರೂಪಾಯಿಗಳಷ್ಟು ಡಿಜಿಟಲ್ ಇ-ರುಪಿ ಚಲಾವಣೆಯಲ್ಲಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಭಾರತೀಯ ರಿಸರ್ಬ್ ಬ್ಯಾಂಕ್ ಇ-ರುಪಿ ಎಂಬ ಡಿಜಿಟಲ್ ಕರೆನ್ಸಿಗಳನ್ನು ಕಳೆದ ವರ್ಷದ ನವೆಂಬರ್ ತಿಂಗಳಿನಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತಂದಿತ್ತು. ನಂವೆಬರ್ 1, 2022 ರಂದು ಸಗಟು ವಿಭಾಗದಲ್ಲಿ e₹-W ಹಾಗು ಡಿಸೆಂಬರ್ 1, 2022 ರಂದು ಚಿಲ್ಲರೆ ವಿಭಾಗದಲ್ಲಿ e₹-R ಎಂಬ ಹೆಸರಿನಲ್ಲಿ ಜಾರಿಗೆ ತರಲಾಗಿತ್ತು.
ಇದರಲ್ಲಿ ಪ್ರಸ್ತುತ ಚಿಲ್ಲರೆ ವಿಭಾಗದಲ್ಲಿ 4.14 ಕೋಟಿ ರೂ. ಮತ್ತು ಸಗಟು ವಿಭಾಗದಲ್ಲಿ 126.27 ಕೋಟಿ ರೂಪಾಯಿ ಮೌಲ್ಯದ ಇ-ರುಪಿ ಚಲಾವಣೆಯಲ್ಲಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಭಾರತದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಬರೋಡಾ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಎಚ್ಡಿಎಫ್ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್, ಯೆಸ್ ಬ್ಯಾಂಕ್, ಐಡಿಎಫ್ಸಿ ಫಸ್ಟ್ ಬ್ಯಾಂಕ್ ಮತ್ತು ಎಚ್ಎಸ್ಬಿಸಿ ಬ್ಯಾಂಕ್ ಸೇರಿದಂತೆ 9 ಬ್ಯಾಂಕುಗಳು ಡಿಜಿಟಲ್ ರೂಪಾಯಿ ಪ್ರಾಯೋಗಿಕದಲ್ಲಿ ಭಾಗವಹಿಸುತ್ತಿವೆ ಎಂದು ವಿತ್ತ ಸಚಿವರು ಹೇಳಿದ್ದಾರೆ.