Saturday, March 25, 2023

Latest Posts

CINE NEWS | ಆಸ್ಕರ್‌ನಲ್ಲಿ ಆರ್‌ಆರ್‌ಆರ್ ‘ಬಾಲಿವುಡ್ ಸಿನಿಮಾ’ ಎಂದು ನಿರೂಪಣೆ, ನಟಿ ರಮ್ಯಾ ಗರಂ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಾಟು ನಾಟು ಹಾಡಿಗೆ ಆಸ್ಕರ್ ಪ್ರಶಸ್ತಿ ಲಭಿಸಿದ್ದು, ಇಡೀ ಭಾರತೀಯ ಸಿನಿರಂಗ ಸಂತಸ ವ್ಯಕ್ತಪಡಿಸಿದೆ.
ಆರ್‌ಆರ್‌ಆರ್ ಚಿತ್ರದ ಬಗ್ಗೆ ಆಸ್ಕರ್‌ನಲ್ಲಿ ವಿವರಣೆ ಕೊಡುವಾಗ ಬಾಲಿವುಡ್ ಸಿನಿಮಾ ಎಂದು ನಿರೂಪಕ ತಪ್ಪಾಗಿ ಉಲ್ಲೇಖ ಮಾಡಿದ್ದು, ಇದೀಗ ಹಲವರ ಅಸಮಾಧಾನಕ್ಕೆ ಕಾರಣವಾಗಿದೆ.

ನಿರೂಪಕ ಜಿಮ್ಮಿ ಕಿಮ್ಮೆಲ್ ಬಾಲಿವುಡ್ ಸಿನಿಮಾ ಆರ್‌ಆರ್‌ಆರ್ ಎಂದು ಹೇಳಿದ್ದಾರೆ, ಈ ಬಗ್ಗೆ ನಟಿ ರಮ್ಯಾ ಕೂಡ ದನಿ ಎತ್ತಿದ್ದು, ನಾಟು ನಾಟು ತೆಲುಗು ಹಾಡು ಇಷ್ಟೊಂದು ಯಶಸ್ಸು ಪಡೆದಿದ್ದು ಖುಷಿ ವಿಷಯ. ಭಾರತ ವಿಭಿನ್ನ ಸಂಸ್ಕೃತಿ ಮತ್ತೆ ಭಾಷೆಗಳು ವೈವಿದ್ಯಮಯ ದೇಶ ಎಂದು ಇಡೀ ವಿಶ್ವಕ್ಕೆ ತಿಳಿದಿದೆ. ಭಾರತ ಎಂದರೆ ಬರೀ ಹಿಂದಿಯಲ್ಲ, ಭಾರತೀಯ ಸಿನಿಮಾ ಎಂದರೆ ಬರೀ ಬಾಲಿವುಡ್ ಅಲ್ಲ. ರೂಢಿಗತ ಚಿಂತನೆ ಒಂದು ರೀತಿ ಆಲಸಿತನ ಎಂದು ರಮ್ಯಾ ಹೇಳಿದ್ದಾರೆ.

ಇದರ ಜತೆಗೆ ಬೆಂಗಳೂರಿನಲ್ಲಿ ಕನ್ನಡ ಮಾತನಾಡೋದಿಲ್ಲ ಎಂದಿದ್ದಕ್ಕೆ ಆಟೋದಿಂದ ಮಹಿಳೆಯನ್ನು ಕೆಳಗೆ ಇಳಿಸಿದ ಆಟೋ ಚಾಲಕನ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

 

 

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!