ಉಕ್ರೇನ್‌ ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗೆ ನಿಯೋಜನೆಗೊಂಡಿವೆ 130 ರಷ್ಯನ್‌ ಬಸ್‌ಗಳು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಪೂರ್ವ ಉಕ್ರೇನ್‌ ನ ಸುಮಿ ನಗರದಲ್ಲಿ ಸಿಲುಕಿರುವ ಭಾರತೀಯ ವೈದ್ಯಕೀಯ ವಿದ್ಯಾರ್ಥಿಗಳ ರಕ್ಷಣೆಗೆ ರಷ್ಯಾ 130 ಬಸ್‌ ಗಳನ್ನು ನಿಯೋಜಿಸಿದೆ.
ಈ ಬಗ್ಗೆ ಪ್ರಧಾನಿ ಮೋದಿ ಹಾಗೂ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರೊಂದಿಗೆ ಮಾತನಾಡಿ ಭಾರತೀಯರನ್ನು ಸುರಕ್ಷಿತವಾಗಿ ಗಡಿಗಳಿಗೆ ಸ್ಥಳಾಂತರಿಸುವ ಬಗ್ಗೆ ಚರ್ಚೆ ನಡೆಸಿದ ಬೆನ್ನಲ್ಲೇ ರಷ್ಯಾ ಭಾರತೀಯರ ರಕ್ಷಣೆಗೆ ಮುಂದಾಗಿದೆ.
ಈ ಬಗ್ಗೆ ರಷ್ಯಾ ಮೂಲದ ಟಾಸ್‌ ಸುದ್ದಿ ಸಂಸ್ಥೆ ಮಾಹಿತಿ ನೀಡಿದ್ದು, ಭಾರತೀಯ ವಿದ್ಯಾರ್ಥಿಗಳು ಮತ್ತು ಇತರ ವಿದೇಶಿ ನಾಗರಿಕರನ್ನು ರಕ್ಷಿಸುವ ಸಲುವಾಗಿ ಇಂದು ಬೆಳಿಗ್ಗೆ 6 ಗಂಟೆಯಿಂದ ಬೆಲ್ಗೊರೊಡ್ ಪ್ರದೇಶದ ನೆಖೋಟೆಯೆವ್ಕಾ ಮತ್ತು ಸುಡ್ಜಾ ಚೆಕ್‌ಪೋಸ್ಟ್‌ಗಳಿಂದ ಒಟ್ಟು 130 ಬಸ್‌ಗಳು ಖಾರ್ಕಿವ್ ಮತ್ತು ಸುಮಿಗೆ ಹೊರಡಲು ಸಿದ್ಧವಾಗಿವೆ ಎಂದು ರಷ್ಯಾ ರಾಷ್ಟ್ರೀಯ ರಕ್ಷಣಾ ನಿಯಂತ್ರಣ ಕೇಂದ್ರದ ಮುಖ್ಯಸ್ಥ ಕರ್ನಲ್‌ ಜನರಲ್‌ ಮಿಖಾಯಿಲ್‌ ಮಿಜಿಂಟ್ಸೆವ್‌ ತಿಳಿಸಿದ್ದಾರೆ ಎಂದು ಉಲ್ಲೇಖಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!