ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಇರಾಕ್‌ನ ವಿಶ್ವವಿದ್ಯಾಲಯವೊಂದರ ಬಳಿಯಿರುವ ವಸತಿ ನಿಲಯದಲ್ಲಿಅಗ್ನಿ ಅವಘಡ ಸಂಭವಿಸಿದ್ದು, 14 ಜನರು ಮೃತಪಟ್ಟಿದ್ದು, 18 ಜನರು ಗಾಯಗೊಂಡಿರುವ ಘಟನೆ ಶುಕ್ರವಾರ ಸಂಜೆ ನಡೆದಿದೆ.
ಎರ್ಬಿಲ್ ಪೂರ್ವದಲ್ಲಿರುವ ಸೊರಾನ್‌ನಲ್ಲಿನ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ವೇಳೆ ಕಟ್ಟಡದಲ್ಲಿದ್ದ 14 ಮಂದಿ ಸಜೀವ ದಹನಗೊಂಡಿದ್ದಾರೆ ಮತ್ತು 18 ಜನರಿಗೆ ಗಾಯಗಳಾಗಿವೆ ಎಂದು ಸೊರಾನ್ ಆರೋಗ್ಯ ನಿರ್ದೇಶನಾಲಯದ ಮುಖ್ಯಸ್ಥ ಕಾಮರಾಮ್ ಮುಲ್ಲಾ ಮೊಹಮ್ಮದ್ ತಿಳಿಸಿದ್ದಾರೆ.
ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿದ್ದು, ಬೆಂಕಿ ನಂದಿಸಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸ್ಥಳೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.