ಪುಲ್ವಾಮಾ ಕರಾಳ ದಿನಕ್ಕೆ 4ವರ್ಷ: ಭಯಾನಕ ಘಟನೆಯ ವೃತ್ತಾಂತ, ಹುತಾತ್ಮ ಯೋಧರ ಸ್ಮರಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಇಂದು ಜಗತ್ತು ಪ್ರೇಮಿಗಳ ದಿನವನ್ನಾಚರಿಸುತ್ತಿದ್ದರೆ, ಭಾರತಕ್ಕೆ ಮಾತ್ರ ಕರಾಳ ದಿನವಾಗಿದೆ. ಭರತಮಾತೆಯ 40 ಪುತ್ರರ ಪ್ರಾಣವನ್ನು ಕಸಿದ ದುರಂತದ ದಿನ ಇಂದು. ವೀರಯೋಧರ ನಾಲ್ಕನೇ ವರ್ಷದ ಸ್ಮರಣೆ ನಾಲ್ಕು ವರ್ಷಗಳ ಹಿಂದೆ ಇದೇ ದಿನ 2019 ಫೆಬ್ರವರಿ 14 ರಂದು, 40 ಸಿಆರ್‌ಪಿಎಫ್ ಯೋಧರು ಪ್ರಾಣ ಕಳೆದುಕೊಂಡ ಸುದ್ದಿ ಇಡೀ ದೇಶದ ಜನರಿಗೆ ಬರಸಿಡಿಲು ಬಡಿದಂತಾಗಿತ್ತು. ವೀರ ಯೋಧರನ್ನು ಕಳೆದುಕೊಂಡ ದುಃಖದಲ್ಲಿ ಜನರಿದ್ದರೆ, ಅವರ ಕುಟುಂಬಸ್ಥರ ಕಣ್ಣೀರು ನದಿಯಂತೆ ಹರಿದಿತ್ತು. ಇವರೆಲ್ಲರ ನೋವು ಕಿರಾತಕರ ರುಂಡ ಚೆಂಡಾಡುವವರೆಗೆ ಸಮಾಧಾನವಿರಲಿಲ್ಲ.

ಭಾರತ ಇಂದು ಭೀಕರ ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ 40 ವೀರ ಸಿಆರ್‌ಪಿಎಫ್ ಯೋಧರನ್ನು ಸ್ಮರಿಸುತ್ತಿದೆ. ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಮೂಲಕ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 44 ರ ಜಮ್ಮು-ಶ್ರೀನಗರ ವಿಭಾಗದಲ್ಲಿ ಯೋಧರನ್ನು ಹೊತ್ತೊಯ್ಯುತ್ತಿದ್ದ ಸೇನಾ ಟ್ರಕ್‌ ಮೇಲೆ ಈ ದಾಳಿ ನಡೆದಿತ್ತು. ಸ್ಫೋಟಕ ತುಂಬಿದ ಎಸ್‌ಯುವಿ ಸಿಆರ್‌ಪಿಎಫ್ ಬಸ್ ಒಂದಕ್ಕೆ ಡಿಕ್ಕಿ ಹೊಡೆದು 40 ಭಾರತೀಯ ಸಿಆರ್‌ಒಎಫ್ ಸೈನಿಕರನ್ನು ಕೊಂದಿತು. ಬಸ್ ಚಾಲಕನನ್ನು ಜೈಶ್-ಎ-ಮೊಹಮ್ಮದ್ ಆತ್ಮಾಹುತಿ ಬಾಂಬರ್ ಎಂದು ಗುರುತಿಸಲಾಗಿದ್ದು, ದಾಳಿಯ ನಂತರ, ಜೈಶ್-ಎ-ಮೊಹಮ್ಮದ್ ದಾಳಿಯ ಹೊಣೆಯನ್ನು ಹೊತ್ತುಕೊಂಡಿದ್ದು. ದಾಳಿಕೋರ ಆದಿಲ್ ಅಹ್ಮದ್ ದಾರ್ ಎಂಬ 22 ವರ್ಷದ ಯುವಕನ ಆತ್ಮಹತ್ಯಾ ಬಾಂಬ್‌ ದಾಳಿಯ ವಿಡಿಯೊವನ್ನು ಪೋಸ್ಟ್ ಮಾಡಿದೆ.

ಹುತಾತ್ಮ 40 ಯೋಧರು ಇವರೇ ನೋಡಿ

Pulwama terror attack: Complete list of 40 martyred CRPF jawans, check  details | The Financial Express

ಬಾಲಾಕೋಟ್ ವೈಮಾನಿಕ ದಾಳಿ

ಭಾರತದ ಭದ್ರತಾ ಪಡೆಗಳ ಮೇಲೆ ಮಾರಣಾಂತಿಕ ದಾಳಿಗೆ ಪ್ರತಕಾರವಾಗಿ 12ದಿನಗಳಲ್ಲಿ ಭಾರತದ ರಕ್ಷಣಾ ಪಡೆಗಳಿಂದ ಭಯೋತ್ಪಾದನಾ ನಿಗ್ರಹ ವೈಮಾನಿಕ ದಾಳಿ ನಡೆಸಲಾಯಿತು. ಫೆಬ್ರವರಿ 26, 2019 ರ ಮುಂಜಾನೆ, ಭಾರತೀಯ ವಾಯುಪಡೆಯ ಹಲವಾರು ಜೆಟ್‌ಗಳು ಪಾಕಿಸ್ತಾನದ ಬಾಲಾಕೋಟ್ ಪ್ರದೇಶದಲ್ಲಿನ ಭಯೋತ್ಪಾದಕ ಶಿಬಿರದ ಮೇಲೆ ದಾಳಿ ನಡೆಸಿತು. ಭದ್ರತಾ ಪಡೆಗಳ ರೋಷಾವೇಶಕ್ಕೆ ಭಯೋತ್ಪಾದಕರು ಅಕ್ಷರಶಃ ನಡುಗಿ ಹೋಗಿದ್ದರು. ಜೈಶ್‌ ಸಂಘಟನೆಯ ಸುಮಾರು 500 ಭಯೋತ್ಪಾದಕರನ್ನು ಹತ್ಯೆಮಾಡಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!