ಸ್ಟಾರ್ಟಪ್‌‌ ಇಂಡಿಯಾ ಯೋಜನೆಯಡಿ ಉತ್ತೇಜನ ಪಡೆದಿವೆ 1,400 ನವೋದ್ದಿಮೆಗಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಭಾರತದಲ್ಲಿ ಹೊಸ ಉದ್ದಿಮೆಗಳನ್ನು ಬೆಳೆಸುವ ನಿಟ್ಟಿನಲ್ಲಿ ಜಾರಿಗೆ ಬಂದ ಸ್ಟಾರ್ಟಪ್‌ ಇಂಡಿಯಾ ಯೋಜನೆಯಡಿ ಭಾರತದಲ್ಲಿ 1400ಕ್ಕೂ ಅಧಿಕ ನವೋದ್ದಿಮೆಗಳು ಉತ್ತೇಜನ ಪಡೆದಿವೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಖಾತೆ ರಾಜ್ಯ ಸಚಿವ ಸೋಮ್ ಪ್ರಕಾಶ್ ಅವರು ಸಂಸತ್ತಿಗೆ ಮಾಹಿತಿ ನೀಡಿದ್ದಾರೆ.

ಕಳೆದ ಎರಡು ವರ್ಷಗಳಲ್ಲಿ ಸ್ಟಾರ್ಟಪ್‌ ಇಂಡಿಯಾದ ಸೀಡ್ ಫಂಡ್ ಸ್ಕೀಮ್ (ಎಸ್‌ಐಎಸ್‌ಎಫ್‌ಎಸ್) ಅಡಿಯಲ್ಲಿ 656 ಸ್ಟಾರ್ಟ್‌ಅಪ್‌ ಗಳು ಉತ್ತೇಜನ ಪಡದಿವೆ. ಕೇಂದ್ರದ ಪ್ರಮುಖ ಯೋಜನೆಯಡಿಯಲ್ಲಿ ಅನುಮೋದಿಸಲಾದ 126 ಇನ್ಕ್ಯುಬೇಟರ್‌ಗಳ ಮೂಲಕ ಸ್ಟಾರ್ಟ್‌ಅಪ್‌ಗಳನ್ನು ಬೆಂಬಲಿಸಲಾಗಿದೆ. 2021-22ರಲ್ಲಿ 304 ಸ್ಟಾರ್ಟಪ್‌ ಗಳನ್ನು ಬೆಳೆಸಲಾಗಿದ್ದು 2023ರಲ್ಲಿ 352 ಸ್ಟಾರ್ಟಪ್‌ ಗಳಿಗೆ ಹೆಚ್ಚುವರಿ ಬೆಂಬಲ ವಿಸ್ತರಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಉತ್ತೇಜಿಸಲ್ಪಟ್ಟ ಸ್ಟಾರ್ಟಪ್‌ ಗಳ ಪೈಕಿ ಕರ್ನಾಟಕವು ಹೆಚ್ಚಿನ ಪಾಲು ಹೊಂದಿದ್ದು 126 ಕರ್ನಾಟಕದ ನವೋದ್ದಿಮೆಗಳಿವೆ, ಎರಡನೇ ಸ್ಥಾನದಲ್ಲಿ ಮಹಾರಾಷ್ಟ್ರವಿದ್ದು 104 ನವೋದ್ದಿಮೆಗಳು ಉತ್ತೇಜಿಸಲ್ಪಟ್ಟಿವೆ. ಹಾಗೆಯೇ ತಮಿಳುನಾಡು, ಗುಜರಾತ್‌, ತೆಲಂಗಾಣ ರಾಜ್ಯಗಳು ನಂತರದ ಸ್ಥಾನದಲ್ಲಿವೆ. ಫಂಡ್ ಆಫ್ ಫಂಡ್ಸ್ ಫಾರ್ ಸ್ಟಾರ್ಟಪ್ಸ್ (ಎಫ್‌ಎಫ್‌ಎಸ್) ಯೋಜನೆಯಡಿ ಇದುವರೆಗೆ 773 ಸ್ಟಾರ್ಟಪ್‌ಗಳನ್ನು ಬೆಂಬಲಿಸಲಾಗಿದೆ ಎಂದು ಸಚಿವರು ಹೇಳಿದ್ದು, 2020 ರಲ್ಲಿ FFS ಯೋಜನೆಯಡಿಯಲ್ಲಿ 120 ಸ್ಟಾರ್ಟ್‌ಅಪ್‌ಗಳು ಉತ್ತೇಜನ ಪಡೆದಿವೆ ಹಾಗೆಯೇ 2021 ರಲ್ಲಿ ಇನ್ನೂ 86 ಸ್ಟಾರ್ಟ್‌ಅಪ್‌ಗಳಿಗೆ ಮಾರ್ಗದರ್ಶನ ನೀಡಲಾಗಿದೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!