ಹೊಸದಿಗಂತ ವರದಿ, ಮಂಗಳೂರು:
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ 146 ಕೊರೋನಾ ಪಾಸಿಟಿವ್ ಪ್ರಕರಣ ವರದಿಯಾಗಿದೆ. ಮಂಗಳವಾರ ಒಂದೇ ದಿನ ಏಳು ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.
ಮೃತ ಏಳು ಮಂದಿಯ ಪೈಕಿ ಇಬ್ಬರು ಮಂಗಳೂರು ತಾಲೂಕಿನವರು, ತಲಾ ಒಬ್ಬರು ಬಂಟ್ವಾಳ ಮತ್ತು ಪುತ್ತೂರು ತಾಲೂಕು ನಿವಾಸಿಗಳು. ಉಳಿದ ಮೂವರು ಹೊರಜಿಲ್ಲೆಯ ನಿವಾಸಿಗಳು. ಇವರಲ್ಲಿ ಐವರು ಪುರುಷರು, ಇಬ್ಬರು ಮಹಿಳೆಯರು. 392 ಮಂದಿ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಪಾಸಿಟಿವಿಟಿ ದರ ಶೇ. 2.87 ದಾಖಲಾಗಿದೆ.
ಜಿಲ್ಲೆಯಲ್ಲಿ ಈಗ ಒಟ್ಟು ಸೋಂಕಿತರ ಸಂಖ್ಯೆ 134558 ಕ್ಕೆ ಏರಿಕೆಯಾಗಿದೆ. ಈ ಪೈಕಿ 1507 ಸಕ್ರಿಯ ಪ್ರಕರಣಗಳು. 131246 ಮಂದಿ ಗುಣಮುಖರಾಗಿದ್ದಾರೆ. 1805 ಮಂದಿ ಮೃತಪಟ್ಟಿದ್ದಾರೆ ಎಂದು ಜಿಲ್ಲಾಡಳಿತ ತಿಳಿಸಿದೆ.