150 ಕೋಟಿ ರೂ. ಗಡಿ ದಾಟಿದ ದಿ ಕಾಶ್ಮೀರ್ ಫೈಲ್ಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್

ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ದಿ ಕಾಶ್ಮೀರ್ ಫೈಲ್ಸ್ ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡುತ್ತಿದ್ದು, ಜನಮಾನಸಕ್ಕೆ ತುಂಬಾ ಹತ್ತಿರವಾಗುತ್ತಿದೆ. ಇದೀಗ ಸಿನಿಮಾ ರಿಲೀಸ್ ಆಗಿ ಎರಡನೇ ವಾರವಾಗಿದ್ದು, ಬರೋಬ್ಬರಿ 150 ಕೋಟಿ ರೂ.ಗಳ ಗಡಿಯನ್ನು ದಾಟಿ ಸಿನಿಮಾ ಕ್ಷೇತ್ರದಲ್ಲಿ ದಾಖಲೆ ನಿರ್ಮಿಸಿದೆ.
ಈ ಚಿತ್ರ ಮೊದಲ ದಿನವೇ 3.55 ಕೋಟಿ ಕಲೆಕ್ಷನ್ ಮಾಡಿದೆ. ಅದೇ ಮೊದಲ ಶನಿವಾರ 8.50 ಕೋಟಿ ರೂ.ಗೆ ಏರಿತ್ತು. ಮೊದಲ ಭಾನುವಾರ ಮತ್ತು ಸೋಮವಾರ ಕ್ರಮವಾಗಿ 15.10 ಕೋಟಿ ಮತ್ತು 15.05 ಕೋಟಿ ರೂ. ಗಲ್ಲಾಪೆಟ್ಟಿಗೆಯಲ್ಲಿ ದೋಚಿ ದಾಖಲೆ ನಿರ್ಮಿಸಿತ್ತು.
ಈಗಾಗಲೇ ಬಾಲಿವುಡ್​ನ ಇತರ ಸಿನಿಮಾಗಳು ನಿರ್ಮಿಸಿದ್ದ ದಾಖಲೆಯನ್ನು ಹಿಂದಿಕ್ಕಿ ಕಾಶ್ಮೀರಿ ಫೈಲ್ಸ್​ ಹೊಸ ದಾಖಲೆಯನ್ನು ತನ್ನದಾಗಿಸಿಕೊಂಡಿದೆ. ಸದ್ಯ ಒಟ್ಟು 167.45 ಕೋಟಿಗೆ ದಾಖಲೆಯ ಮುಂಚೂಣಿಯಲ್ಲಿದೆ.
1990ರಲ್ಲಿ ನಡೆದ ಕಾಶ್ಮೀರಿ ಪಂಡಿತರ ಹತ್ಯೆ ಸುತ್ತ ಸುತ್ತುವ ಕಥೆಯಿರುವ ಸಿನಿಮಾವಾಗಿದ್ದು, ಅನುಪಮ್ ಖೇರ್​, ಪಲ್ಲವಿ ಜೋಶಿ, ಮಿಥುನ್ ಚಕ್ರವರ್ತಿ, ದರ್ಶನ್ ಕುಮಾರ್, ಪುನೀತ್ ಇಸ್ಸಾರ್, ಮೃಣಾಲ್ ಕುಲಕರ್ಣಿ ಮತ್ತಿತರರು ಇದರಲ್ಲಿ ಅಭಿನಯಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here