ಉಕ್ರೇನ್ ಮೇಲಿನ ರಷ್ಯಾ ಆಕ್ರಮಣಕ್ಕೆ 150 ದಿನ: ಪಿಕ್ಚರ್ ಅಬ್ಬೀ ಬಾಕಿ ಹೈ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಸಾಕಷ್ಟು ಸಾವು ನೋವು, ವಿಶ್ವದ ಆರ್ಥಿಕ ಸ್ಥಿತಿಯ ಮೇಲೆ ತೀವ್ರ ದುಷ್ಪರಿಣಾಮ ಬೀರಿರುವ ಉಕ್ರೇನ್ ಮೇಲಿನ ರಷ್ಯಾ ಆಕ್ರಮಣ 150 ದಿನ ಪೂರ್ತಿಗೊಳಿಸಿದೆ. 2022ರ ಫೆ.24ರಂದು ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಆರಂಭಿಸಿತ್ತು. ಆಗ ಉಕ್ರೇನ್‌ನಂಥ ಪುಟ್ಟ ದೇಶವನ್ನು ರಷ್ಯಾ ಕೆಲವೇ ದಿನಗಳಲ್ಲಿ ವಶಪಡಿಸಿಕೊಳ್ಳಲಿದೆ ಎಂದು ಅನೇಕರು ಭವುಷ್ಯ ನುಡಿದಿದ್ದರು. ಆದರೆ ಅದು ಹುಸಿಯಾಗಿದೆ.

ಉಕ್ರೇನಿಗಳ ತೀವ್ರ ಪ್ರತಿರೋಧ ಹಾಗೂ ಅಂತಾರಾಷ್ಟ್ರೀಯ ಒತ್ತಡದ ಕಾರಣ ರಷ್ಯಾಗೆ ಈವರೆಗೆ ಕೇವಲ ಶೇ. 20ರಷ್ಟು ಉಕ್ರೇನಿ ಭಾಗವನ್ನು ಮಾತ್ರ ಸಂಪೂರ್ಣ ವಶಪಡಿಸಿಕೊಳ್ಳಲು ಸಾಧ್ಯವಾಗಿದೆ. ಉಳಿದ ಭಾಗಗಳ ವಶಕ್ಕೆ ರಷ್ಯಾ ಯುದ್ಧ ಮುಂದುವರಿಸಿದೆ.
ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಎಂಬಂತೆ ಯುದ್ಧ ಇನ್ನೂ ಮುಂದುವರಿದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!