ಮಹಿಳೆಯರಿಗೆ ಮಾಸಿಕ 1,500, ಯುವಕರಿಗೆ ಮಾಸಿಕ 3,000: ಆಂಧ್ರದಲ್ಲಿ ಎನ್‌ಡಿಎ ಪ್ರಣಾಳಿಕೆ ಬಿಡುಗಡೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಆಂಧ್ರ ಪ್ರದೇಶದ ವಿಧಾನಸಭೆ ಚುನಾವಣೆಗೆ ನ್ಯಾಷನಲ್ ಡೆಮಾಕ್ರಟಿಕ್ ಅಲಯನ್ಸ್(ಎನ್‌ಡಿಎ) ಜಂಟಿ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಅರ್ಹ ಮಹಿಳೆಯರಿಗೆ ಮಾಸಿಕ ₹1,500 ಪಿಂಚಣಿಯ ಭರವಸೆ ನೀಡಿದೆ.

ತೆಲುಗು ದೇಶಂ, ಜನಸೇನಾ ಮತ್ತು ಬಿಜೆಪಿಯನ್ನೊಳಗೊಂಡ ಆಂಧ್ರದ ಎನ್‌ಡಿಎ ಮೈತ್ರಿಕೂಟವು, ನಿರುದ್ಯೋಗಿ ಯುವಕರಿಗೆ ಮಾಸಿಕ ₹3,000 ಹಣಕಾಸಿನ ನೆರವನ್ನು ಘೋಷಿಸಿದೆ.
ವೇಳೆ ಮಾತನಾಡಿದ ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್, ಟಿಡಿಪಿಯ ‘ಸೂಪರ್ ಸಿಕ್ಸ್’ಮತ್ತು ನಮ್ಮ ಪಕ್ಷದ ‘ಶನ್ಮುಕ್ತ ವ್ಯೂಹಂ’ ಪರಿಕಲ್ಪನೆಯ ಸಂಯೋಜನೆಯೇ ಈ ಪ್ರಣಾಳಿಕೆ ಎಂದು ಹೇಳಿದರು.

ಮಹಿಳೆಯರಿಗೆ ಸರ್ಕಾರಿ ಬಸ್‌ನಲ್ಲಿ ಉಚಿತ ಪ್ರಯಾಣ, ಪ್ರತಿ ಮನೆಗೆ ವಾರ್ಷಿಕ ಮೂರು ಉಚಿತ ಸಿಲಿಂಡರ್ ಮತ್ತು ವ್ಯಾಸಂಗ ಮಾಡುತ್ತಿರುವ ಪ್ರತಿ ವಿದ್ಯಾರ್ಥಿಗೆ ವಾರ್ಷಿಕ ₹15,000 ಸಹಾಯಧನದ ಭರರವಸೆ ಸೇರಿದಂತೆ ಹಲವು ಆಶ್ವಾಸನೆಗಳನ್ನೊಳಗೊಂಡ ‘ಸೂಪರ್ ಸಿಕ್ಸ್’ಪ್ರಣಾಳಿಕೆಯನ್ನು ಈ ಹಿಂದೆ ಟಿಡಿಪಿ ಬಿಡುಗಡೆ ಮಾಡಿತ್ತು.

ಆಂಧ್ರ ಪ್ರದೇಶದಲ್ಲಿ ಎನ್‌ಡಿಎ ಸೀಟು ಹಂಚಿಕೆ ಪ್ರಕಾರ, ಟಿಡಿಪಿ 144 ವಿಧಾನಸಭಾ ಕ್ಷೇತ್ರಗಳು ಮತ್ತು 17 ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಿದೆ. ಬಿಜೆಪಿ 6 ಲೋಕಭಾ ಮತ್ತು 10 ವಿಧಾನಸಭಾ ಕ್ಷೇತ್ರಗಳಲ್ಲಿ, ಜನಸೇನಾ 2 ಲೋಕಸಭಾ ಕ್ಷೇತ್ರ ಮತ್ತು 21 ವಿಧಾನಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ.

ಆಂಧ್ರ ಪ್ರದೇಶದ 175 ವಿಧಾನಸಭಾ ಕ್ಷೇತ್ರಗಳು ಮತ್ತು 25 ಲೋಕಸಭಾ ಕ್ಷೇತ್ರಗಳಲ್ಲಿ ಮೇ 13ರಂದು ಮತದಾನ ನಡೆಯಲಿದೆ. ಜೂನ್ 4ಕ್ಕೆ ಫಲಿತಾಂಶ ಹೊರಬೀಳಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!