ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಬಾಂಗ್ಲಾದೇಶದ ಏಜೆಂಟ್‌ಗೆ 15,000 ರೂ. ನೀಡಿ ಗಡಿ ದಾಟಿ ಭಾರತಕ್ಕೆ ಬಂದು ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ಮೂಲದ ಮಹಿಳೆಯೊಬ್ಬರನ್ನು ಸೂರತ್‌ನ ವಿಶೇಷ ಕಾರ್ಯಾಚರಣೆ ಗುಂಪು (ಎಸ್‌ಒಜಿ) ಪೊಲೀಸರು ಶನಿವಾರ ಬಂಧಿಸಿದ್ದಾರೆ.
ರಸಿದಾ ಬೇಗಂ ಜಹಾಂಗೀರ್ ಅಲಿ ಶೇಖ್ ಎಂಬ ಮಹಿಳೆ ನಾಲ್ಕು ವರ್ಷಗಳ ಹಿಂದೆ ಅಕ್ರಮವಾಗಿ ಭಾರತವನ್ನು ಪ್ರವೇಶಿಸಿದ್ದಳು. ಆರಂಭದಲ್ಲಿ ಒಂದು ವರ್ಷ ಮುಂಬೈನಲ್ಲಿ ವಾಸವಾಗಿದ್ದು ನಂತರ ಗುಜರಾತ್‌ನ ಸೂರತ್‌ನಲ್ಲಿ ನೆಲೆಸಿದ್ದು ಅಲ್ಲಿ ಆಕೆ ವಿವಿಧ ಸ್ಪಾಗಳಲ್ಲಿ ಕೆಲಸ ಮಾಡುತ್ತಿದ್ದಳು.
ನಕಲಿ ದಾಖಲೆಗಳನ್ನು ಬಳಸಿ, ರಸಿದಾ ಹೆಸರಲ್ಲಿ ಆಧಾರ್ ಕಾರ್ಡ್ ಮತ್ತು ಇತರ ಭಾರತೀಯ ಗುರುತಿನ ಚೀಟಿಗಳನ್ನು ಮಾಡಿಸಿಕೊಂಡು ವಾಸಿಸುತ್ತಿದ್ದಳು. ರಸಿದಾ ಬಂಧನದ ವೇಳೆ ಪೊಲೀಸರು ಆಕೆ ಬಾಂಗ್ಲಾದೇಶಿ ಪ್ರಜೆ ಎಂದು ಗುರುತಿಸುವ ದಾಖಲೆಯನ್ನು ಸಹ ವಶಪಡಿಸಿಕೊಂಡಿದ್ದಾರೆ.
ನಾನು ಭಾರತಕ್ಕೆ ಬರಲು ಏಜೆಂಟ್‌ಗೆ 15,000 ಬಾಂಗ್ಲಾದೇಶದ ಟಾಕಾವನ್ನು ನೀಡಿದ್ದೇನೆ ಎಂದು ಸೂರತ್‌ನ ಎಸ್‌ಒಜಿ ವಿಚಾರಣೆಯ ಸಮಯದಲ್ಲಿ ಆಕೆ ಬಹಿರಂಗಪಡಿಸಿದಳು. ಪಶ್ಚಿಮ ಬಂಗಾಳದ ಮೂಲಕ ಭಾರತವನ್ನು ಪ್ರವೇಶಿಸಿದ್ದೇಗೆ, ನಂತರ ರೈಲಿನಲ್ಲಿ ಮುಂಬೈಗೆ ಪ್ರಯಾಣ ಅಂತಿಮವಾಗಿ ಸೂರತ್‌ಗೆ ತಲುಪಿದ್ದು ಅಲ್ಲಿ ಕಳೆದ ಮೂರು ವರ್ಷಗಳಿಂದ ವಿವಿಧ ಸ್ಥಳಗಳಲ್ಲಿ ಕೊಠಡಿಗಳನ್ನು ಬಾಡಿಗೆಗೆ ಪಡೆದಿದ್ದು ಹೇಗೆ ಎಂಬುದನ್ನು ವಿವರಿಸಿದ್ದಾಳೆ.