ರಾಜ್ಯ ಬಜೆಟ್| ರೈಲ್ವೆ ಜಾಲ ಅಭಿವೃದ್ಧಿಗೆ 1537 ಕೋಟಿ ರೂಪಾಯಿ ಘೋಷಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ರಾಜ್ಯ ಬಜೆಟ್‌ ಅನ್ನು ಮಂಡಿಸುತ್ತಿದ್ದು, ರೈಲ್ವೆ ಜಾಲ ಅಭಿವೃದ್ಧಿಗೆ 1537 ಕೋಟಿ ರೂಪಾಯಿಗಳನ್ನು ಘೋಷಿಸಿದ್ದಾರೆ.

ಕರ್ನಾಟಕ ರೈಲ್ವೆ ಕಾಮಗಾರಿಗಳಿಗೆ 1537 ಕೋಟಿ ರೂಪಾಯಿ ಒದಗಿಸಲಾಗುತ್ತಿದೆ. ತುಮಕೂರು- ಶಿಕಾರಿಪುರ, ಬಾಗಲಕೋಟೆ -ಕುಡಚಿ, ಗದಗ-ವಾಡಿ ಸೇರಿದಂತೆ ವಿವಿಧೆಡೆ ರೈಲ್ವೆ ಮಾರ್ಗ ಅಭಿವೃದ್ಧಿಗೆ ಅನುದಾನ ನೀಡಲಾಗಿದೆ ಎಂದು ಹೇಳಿದ್ದಾರೆ. ಕೇಂದ್ರ ಸರ್ಕಾರದಿಂದ ಕರ್ನಾಟಕದ ರೈಲ್ವೆ ವಿಭಾಗಕ್ಕೆ 7561 ಕೋಟಿ ರೂ. ನೀಡಲಾಗಿರುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!