ಹೊಸದಿಗಂತ ಡಿಜಿಟಲ್ ಡೆಸ್ಕ್:
ಭೀಕರ ಭೂಕಂಪನಕ್ಕೆ ಜಪಾನ್ ತತ್ತರಿಸಿದ್ದು, ಹೊಸ ವರ್ಷದ ಮೊದಲ ದಿನವೇ ಪ್ರಕೃತಿ ಈ ದೇಶಕ್ಕೆ ಶಾಕ್ ನೀಡಿದೆ.
ಜಪಾನ್‌ನಲ್ಲಿ ಒಂದೇ ದಿನದಲ್ಲಿ 155 ಬಾರಿ ಭೂಮಿ ಕಂಪಿಸಿದ್ದು, ಕನಿಷ್ಠ ಎಂದು ಮಂದಿ ಮೃತಪಟ್ಟಿದ್ದಾರೆ. ರಿಕ್ಟರ್ ಮಾಪಕದಲ್ಲಿ 7.4-7.6 ರವರೆಗೂ ಕಂಪನ ದಾಖಲಾಗಿದೆ.
ಜಪಾನ್‌ನ ಈಶಾನ್ಯ ಭಾಗದ ನನಾವೋನಲ್ಲಿ ಭೂಕಂಪನದ ಕೇಂದ್ರಬಿಂದುವಾಗಿದ್ದಾರೆ. ಜಪಾನ್ ಅಕ್ಷರಶಃ ನಡುಗಿಹೋಗಿದ್ದು, 32 ಸಾವಿರಕ್ಕೂ ಅಧಿಕ ಮಂದಿ ಸಂತ್ರಸ್ತರಾಗಿದ್ದಾರೆ. ಭೂಕಂಪದಿಂದಾಗಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿದ್ದು, ಜನ ಕತ್ತಲಲ್ಲಿಯೇ ಜೀವಿಸಿದ್ದಾರೆ. ಸಾವಿರಕ್ಕೂ ಅಧಿಕ ಮಂದಿ ಜಪಾನ್ ಮಿಲಿಟರಿ ಬೇಸ್‌ನಲ್ಲಿ ಆಶ್ರಯ ಪಡೆದಿದ್ದಾರೆ.
ಇಶಿವಾಕಾ, ನಿಗಾಟಾ ಹಾಗೂ ಟೊಯಾಮಾ ಪ್ರಾಂತ್ಯದ ಕರಾವಳಿ ಭಾಗಗಳಲ್ಲಿ 155 ಬಾರಿ ಭೂಮಿ ಕಂಪಿಸಿದೆ. ಮೊದಲ ಮೂರು ಭೂಕಂಪನ ಭಾರೀ ಪ್ರಬಲವಾಗಿವೆ. ಇನ್ನು ಜಪಾನ್ ಹವಾಮಾನ ಸಂಸ್ಥೆ ಸುನಾಮಿ ಎಚ್ಚರಿಕೆ ನೀಡಿದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಸಿದೆ.
ಮುಂಜಾಗ್ರತಾ ಕ್ರಮವಾಗಿ ಎತ್ತರದ ಪ್ರದೇಶಗಳಿಗೆ ತೆರಳಲು ಜನರಿಗೆ ಸೂಚನೆ ನೀಡಲಾಗಿದೆ. 16 ಅಡಿಯಷ್ಟು ಎತ್ತರದ ಅಲೆಗಳು ಅಪ್ಪಳಿಸುವ ಸಾಧ್ಯತೆ ಇದೆ ಎನ್ನಲಾಗಿದೆ.