ಹೊಸದಿಗಂತ ಡಿಜಿಟಲ್ ಡೆಸ್ಕ್
ಮೇಷ
ವೃತ್ತಿಗೆ ಸಂಬಂಧಿಸಿ ಕೆಲವು ಸಮಸ್ಯೆ ಎದುರಿಸುವಿರಿ. ಕೆಲವರ ವಿರೋಧ ಕಟ್ಟಿಕೊಳ್ಳುವಿರಿ. ಅದನ್ನು ಸಂಧಾನದಿಂದ ಬಗೆಹರಿಸಿಕೊಳ್ಳಿ.
ವೃಷಭ
ಸವಾಲಿನ ದಿನ. ಕೆಲಸದಲ್ಲಿ ಒತ್ತಡ ಕಾಡುವುದು. ನಿಮ್ಮ ಪ್ರಗತಿಗೆ ಅಡ್ಡಿ ತೋರಿಬರುವುದು. ಗುರಿ ಸಾಧಿಸಲು ಸರಿಯಾದ ಯೋಜನೆ ಅವಶ್ಯ.
ಮಿಥುನ
ವ್ಯಕ್ತಿಯೊಬ್ಬರ ಕುರಿತು ಅತೀವ ಸಂವೇದನೆಯಿಂದ ವರ್ತಿಸುವಿರಿ. ಅವರ ನೋವು ನಲಿವುಗಳಿಗೆ ಮಿಡಿಯುವಿರಿ. ಖರ್ಚು ಹೆಚ್ಚಾಗಬಹುದು.
ಕಟಕ
ಆರ್ಥಿಕ ಪರಿಸ್ಥಿತಿ ಸುಧಾರಣೆ. ಹಣದ ಬಿಕ್ಕಟ್ಟು ನಿವಾರಣೆ. ಪ್ರೀತಿ ನಿವೇದನೆಯಲ್ಲಿ ಆತುರ ತೋರದಿರಿ. ಅದು ನಿಮಗೆ ಪೂರಕ ಫಲ ನೀಡಲಾರದು.
ಸಿಂಹ
ಆರ್ಥಿಕ ಸಮಸ್ಯೆಗೆ ಪರಿಹಾರ ಸಿಗುವುದು. ಹಣಕಾಸಿನ ನೆರವು ಒದಗುವುದು. ಕೌಟುಂಬಿಕ ಸಮಸ್ಯೆಗೆ ಸಂಧಾನದ ಪರಿಹಾರ ಕಂಡುಕೊಳ್ಳಿ.
ಕನ್ಯಾ
ಇಂದು ಕೌಟುಂಬಿಕ ಆವಶ್ಯಕತೆಗೆ ಹೆಚ್ಚು ಹಣ ಖರ್ಚು ಮಾಡಬೇಕಾಗುವುದು. ಕುಟುಂಬದ ಹಿರಿಯರ ಆರೋಗ್ಯದ ಬಗ್ಗೆ ಹೆಚ್ಚು ಎಚ್ಚರ ವಹಿಸಿರಿ.
ತುಲಾ
ಹೊಸ ಯೋಜನೆಗೆ ಹಣ ಹೂಡುವ ಮುನ್ನ ಸರಿಯಾಗಿ ವಿಮರ್ಶಿಸಿ. ಆತುರದ ತೀರ್ಮಾನ ಸಲ್ಲದು. ಯಾರದೋ ಮಾತು ಕೇಳಿ ಸಂಬಂಧ ಕೆಡಿಸಿಕೊಳ್ಳಬೇಡಿ.
ವೃಶ್ಚಿಕ
ನಿಮ್ಮ ಕಾರ್ಯವು ಸಹೋದ್ಯೋಗಿಗಳಿಂದ ಮೆಚ್ಚುಗೆಗೆ ಪಾತ್ರವಾಗುವುದು. ನಿಮ್ಮ ಆವಶ್ಯಕತೆಗೆ ತಕ್ಕ ಆರ್ಥಿಕ ಬಲವೂ ಸಿಗುವುದು. ಆಪ್ತ ಬಂಧು ಭೇಟಿ.
ಧನು
ವೃತ್ತಿ ಕ್ಷೇತ್ರದಲ್ಲಿ ಹೆಚ್ಚು ಹೊಣೆಗಾರಿಕೆ. ನಿಮ್ಮ ಸಕಲ ಪರಿಶ್ರಮ ಹಾಕಿ. ಸಂಜೆ ವೇಳೆಗೆ ನಿಮ್ಮ ಕಾರ್ಯಕ್ಕೆ ಮೆಚ್ಚುಗೆ ಪಡೆಯುವಿರಿ. ಕೌಟುಂಬಿಕ ನೆಮ್ಮದಿ.
ಮಕರ
ಮನೆಯಲ್ಲಿ ಭಿನ್ನಮತ ನಿವಾರಣೆ. ಕೌಟುಂಬಿಕ ಸೌಹಾರ್ದ. ಹಣ ಗಳಿಕೆಯ ವಿಷಯದಲ್ಲಿ ನಿಮ್ಮ ಹೊಸ ಯೋಚನೆಗಳಿಗೆ ಸ್ಪಷ್ಟ ರೂಪು ನೀಡಿರಿ.
ಕುಂಭ
ಖಾಸಗಿ ಬದುಕಲ್ಲೂ ವೃತ್ತಿ ಬದುಕಲ್ಲೂ ಮಹತ್ವದ ಬೆಳವಣಿಗೆ ಸಂಭವಿಸಬಹುದು. ಪ್ರೀತಿಯ ವಿಷಯದಲ್ಲಿ ನಿಮ್ಮ ಇಷ್ಟಾರ್ಥ ಈಡೇರುವುದು.
ಮೀನ
ಉದ್ಯೋಗದಲ್ಲಿ ಪ್ರಗತಿ. ನಿರುದ್ಯೋಗಿಗಳಿಗೆ ಉದ್ಯೋಗದ ಅವಕಾಶ. ಕೌಟುಂಬಿಕ ಪರಿಸರ ಉಲ್ಲಾಸದಾಯಕ. ಹುರುಪಿನ ದಿನ.