ಹೊಸದಿಗಂತ ಡಿಜಿಟಲ್ ಡೆಸ್ಕ್:
16 ಬಾರಿಯ WWE ಚಾಂಪಿಯನ್ ಜಾನ್ ಸೀನಾ 2025 ರಿಂದ WWEಗೆ ನಿವೃತ್ತಿ ಘೋಷಿಸಿದ್ದಾರೆ. ಟೊರೊಂಟೊದಲ್ಲಿ ನಡೆದ ಮನಿ ಇನ್ ಬ್ಯಾಂಕ್ ಈವೆಂಟ್‌ನಲ್ಲಿ ಜಾನ್ ಸೀನಾ ತಮ್ಮ ನಿವೃತ್ತಿಯನ್ನು ಘೋಷಿಸಿದರು.
WWE ನಿಂದ ನನ್ನ ನಿವೃತ್ತಿಯನ್ನು ಅಧಿಕೃತವಾಗಿ ಘೋಷಿಸುತ್ತೇನೆ ಎಂದು ಜಾನ್ ಸೀನಾ ಹೇಳಿದ್ದಾರೆ. ನಾನು ತಕ್ಷಣವೇ ನಿವೃತ್ತಿ ಹೇಳುವುದಿಲ್ಲ. 2025 ರ ರಾಯಲ್ ರಂಬಲ್, ಎಲಿಮಿನೇಷನ್ ಚೇಂಬರ್, ಲಾಸ್ ವೇಗಾಸ್‌ನಲ್ಲಿ ರೆಸಲ್ಮೇನಿಯಾ 41 ರಲ್ಲಿ ಅಲೆಜಿಯಂಟ್ ಸ್ಟೇಡಿಯಂನಲ್ಲಿ ಸ್ಪರ್ಧಿಸಲಿದ್ದಾರೆ ಎಂದು ವರದಿಯಾಗಿದೆ.