Monday, January 30, 2023

Latest Posts

ದಟ್ಟ ಮಂಜು: ಉತ್ತರ ರೈಲ್ವೆಯಲ್ಲಿ 17 ರೈಲುಗಳ ಕಾರ್ಯಾಚರಣೆ ವಿಳಂಬ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕಡಿಮೆ ಗೋಚರತೆ ಮತ್ತು ದಟ್ಟ ಮಂಜಿನಿಂದಾಗಿ ದೇಶದ ಉತ್ತರ ಭಾಗಗಳಲ್ಲಿ ಹದಿನೇಳು ಪ್ಯಾಸೆಂಜರ್ ರೈಲುಗಳು ತಡವಾಗಿ ಓಡುತ್ತಿವೆ ಎಂದು ರೈಲ್ವೆ ಅಧಿಕಾರಿಗಳು ಬುಧವಾರ ಮಾಹಿತಿ ನೀಡಿದ್ದಾರೆ. ರೈಲ್ವೆ ಅಧಿಕಾರಿಗಳ ಪ್ರಕಾರ, ವಿಶಾಖಪಟ್ಟಣಂ-ನವದೆಹಲಿ ಆಂಧ್ರಪ್ರದೇಶ ಎಕ್ಸ್‌ಪ್ರೆಸ್, ಮೈಸೂರು-ಎಂಜಿಆರ್ ಚೆನ್ನೈ ಸೆಂಟ್ರಲ್ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್, ಮತ್ತು ರಾಣಿ ಕಮಲಪತಿ-ಹಜರತ್ ನಿಜಾಮುದ್ದೀನ್ ಶಾನ್ ಇ ಭೋಪಾಲ್ ಎಕ್ಸ್‌ಪ್ರೆಸ್ 01:00 ಗಂಟೆ ತಡವಾಗಿ ಚಲಿಸುತ್ತಿವೆ.

ಪ್ರತಾಪಗಢ-ದೆಹಲಿ ಪದ್ಮಾವತ್ ಎಕ್ಸ್‌ಪ್ರೆಸ್, ಬನಾರಸ್-ನವದೆಹಲಿ ಕಾಶಿ ವಿಶ್ವನಾಥ್ ಎಕ್ಸ್‌ಪ್ರೆಸ್ 02:00 ಗಂಟೆಗಳ ಕಾಲ ತಡವಾಗಿ ಚಲಿಸುತ್ತಿವೆ.

ದೆಹಲಿ ಬ್ರಹ್ಮಪುತ್ರ ಮೇಲ್, ಡಾ ಅಮ್ಡೇಕರ್ ನಗರ-ಶ್ರೀ ಮಾತಾ ವೈಷ್ಣೋದೇವಿ ಕತ್ರಾ ಮಾಲ್ವಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್, ದುರ್ಗ್-ಹಜರತ್ ನಿಜಾಮುದ್ದೀನ್ ಹಮ್ಸಾಫರ್ ಎಕ್ಸ್‌ಪ್ರೆಸ್ ಸೇರಿದಂತೆ ರೈಲುಗಳು 02:30 ಗಂಟೆಗಳಿಗೂ ಹೆಚ್ಚು ತಡವಾಗಿ ಚಲಿಸಲಿವೆ ಎಂದು ಅಧಿಕಾರಿಗಳು ತಿಳಿಸಿದರು.

ಜಬಲ್ಪುರ್-ಹಜರತ್ ನಿಜಾಮುದ್ದೀನ್ ಗೊಂಡ್ವಾನಾ ಎಕ್ಸ್‌ಪ್ರೆಸ್ ಮತ್ತು ಭೂಸಾವಲ್-ಹಜರತ್ ನಿಜಾಮುದ್ದೀನ್ ಗೊಂಡ್ವಾನಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಟೈನ್‌ಗಳು ಮೂರು ಗಂಟೆಗಳ ಕಾಲ ತಡವಾಗಿ ಚಲಿಸಲಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!