ಹೊಸದಿಗಂತ ವರದಿ ಹುಬ್ಬಳ್ಳಿ :
ಹದಿನೇಳು ವರ್ಷದ ಪರಿಚಯಸ್ಥ ಬಾಲಕಿಯ ಮೇಲೆ ನಾಲ್ವರು ಸಾಮೂಹಿಕ ಅತ್ಯಾಚಾರ ನಡೆಸಿದ ಕೃತ್ಯ ನಗರದ ಹೊರವಲಯದ ಬೈಪಾಸ್ ಹತ್ತಿರ ನಡೆದಿದೆ.
ತಾಲೂಕಿನ ಶೆರೆವಾಡ ದೇವರಾಜ, ಫಕ್ಕಿರೇಶ ಸೇರಿ ನಾಲ್ವರ ಮೇಲೆ ಗೋಕುಲ ರಸ್ತೆಯ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಪ್ರಕರಣ ದಾಖಲಾಗಿದೆ.
ಬಾಲಕಿಗೆ ಸಾಗರ ಎಂಬುವನ ಮುಖಾಂತರ ದೇವರಾಜ ಪರಿಚಯವಾಗಿದ್ದ. ಇಬ್ಬರ ನಡುವೆ ಸ್ನೇಹವಾಗಿ ನಿತ್ಯ ದೂರವಾಣಿ ಮೂಲಕ ಮಾತನಾಡುತ್ತಿದ್ದರು. ಬುಧವಾರ ದೇವರಾಜ ಬಾಲಕಿಗೆ ಮೊಬೈಲ್ ಕೊಡಿಸುತ್ತೇನೆ ಎಂದು ನಗರಕ್ಕೆ ಕರೆಸಿಕೊಂಡಿದ್ದಾನೆ. ಆಕೆ ಹುಬ್ಬಳ್ಳಿ ಬಂದ ಬಳಿಕ ಮೊಬೈಲ್ ಕೊಡಿಸುವ ನೆಪದಲ್ಲಿ ಹರ್ಷ ಕಾಂಪ್ಲೆಕ್ಸ್ ಹಾಗೂ ನೆಹರೂ ಮೈದಾನ ಸುತ್ತ ಅಲೆದಾಡಿದ್ದಾರೆ. ಬಳಿಕ ತನ್ನ ಸ್ನೇಹಿತ ಫಕ್ಕಿರೇಶನ ಪರಿಚಯ ಮಾಡಿದ್ದಾನೆ. ಅಲ್ಲಿಂದ ಮೂವರು ಬೈಕ್ ನಲ್ಲಿ ಗೋಕುಲ ರಸ್ತೆಯ ಐಸ್ ಕ್ಯೂಬ್ ಹೋಟೆಲ್ ಹೋದಾಗ ಯುವತಿ ಹಾಗೂ ದೇವರಾಜ ನಡುವೆ ವೈಮನಸ್ಸಾಗಿದೆ. ಇದರಿಂದ ಕೋಪಗೊಂಡ ದೇವರಾಜ ಹಾಗೂ ಫಕ್ಕಿರೇಶ ಬಾಲಕಿಯನ್ನು ನಗರದ ಹೊರವಲಯದ ಬೈ ಪಾಸ್ ಹತ್ತಿರ ಕರೆದೊಯ್ದು ಆತ್ಯಾಚಾರವೆಸಗಿದ್ದಾರೆ. ಅಷ್ಟೇ ಅಲ್ಲದೆ ತಮ್ಮಿಬ್ಬರ ಸ್ನೇಹಿತರನ್ನು ಕರೆಸಿದ್ದು, ಅವರು ಸಹ ಅತ್ಯಾಚಾರ ಮಾಡಿದ್ದಾರೆ ಎಂದು ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.