ಹೊಸದಿಗಂತ ವರದಿ, ಮಡಿಕೇರಿ:
ವ್ಯಕ್ತಿಯೊಬ್ಬರ ಮೇಲೆ ಕಾರು ಹತ್ತಿಸಿ ಕೊಲೆಗೆ ಯತ್ನಿಸಿರುವ ಪ್ರಕರಣ ನಡೆದಿದ್ದು, ಇದೀಗ ಗಾಯಾಳು ಸಾವಿಗೀಡಾಗಿದ್ದಾರೆ.
ಮೃತರನ್ನು ಪಾಲಿಬೆಟ್ಟದ ಮೀನು ವ್ಯಾಪಾರಿ ಚರ್ದು ಎಂಬವರ ಪುತ್ರ ಮಹಮ್ಮದ್ ತೌಸಿರ್ ಎಂದು ಗುರುತಿಸಲಾಗಿದೆ.
ವ್ಯಾಪಾರ ಮುಗಿಸಿಕೊಂಡು ಮುಖ್ಯ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭ ಕಾರೊಂದು ಮಹಮ್ಮದ್ ತೌಸಿರ್’ಗೆ ಡಿಕ್ಕಿ ಹೊಡೆದು ಪರಾರಿಯಾಗಿದೆ. ಪರಿಣಾಮ ತಲೆಗೆ ಗಂಭೀರ ಗಾಯಗಳಾಗಿ ಚಿಂತಾಜನಕ ಸ್ಥಿತಿಯಲ್ಲಿದ್ದ ತಾಸಿರ್‌ನನ್ನು ಪಾಲಿಬೆಟ್ಟ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಬಳಿಕ ಹೆಚ್ಚಿನ ಚಿಕಿತ್ಸೆಗೆ ಮೈಸೂರು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಆತ ಕೊನೆಯುಸಿರೆಳೆದಿದ್ದಾರೆ.
ಮೀನು ವ್ಯಾಪಾರಿ ತಾಸಿರ್ ಹಾಗೂ ಪಾಲಿಬೆಟ್ಟದ ನೌಶಾದ್ ಎಂಬಾತನ ನಡುವೆ ಹಳೇ ವೈಷಮ್ಯ ಇದ್ದು, ಆತನೇ ಕಾರು ಡಿಕ್ಕಿಪಡಿಸಿದ್ದಾನೆ ಎಂದು ಸಿದ್ದಾಪುರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಸಂದರ್ಭ ಮೂರ್ನಾಡು ಬಳಿ ಕಾರು ಪತ್ತೆಯಾಗಿದೆ. ಆರೋಪಿ ನೌಶಾದ್ ತಲೆಮರೆಸಿಕೊಂಡಿರುವುದಾಗಿ ಹೇಳಲಾಗಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ